ಕೇಂದ್ರ ಲೋಕಸೇವಾ ಆಯೋಗ Union Public Service Commission (UPSC) 2026ರ CMS ಪರೀಕ್ಷೆ ಮೂಲಕ 1300ಕ್ಕೂ ಹೆಚ್ಚು ವೈದ್ಯಕೀಯ ಅಧಿಕಾರಿ ಹುದ್ದೆಗಳ ಭರ್ತಿಗೆ ದೊಡ್ಡ ಮಟ್ಟದ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.
MBBS ಪದವಿ ಪಡೆದ 32 ವರ್ಷದೊಳಗಿನ ಅಭ್ಯರ್ಥಿಗಳು ಮಾರ್ಚ್ 31ರೊಳಗೆ upsconline.nic.in ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಆಯ್ಕೆ ಲಿಖಿತ ಪರೀಕ್ಷೆ + ಸಂದರ್ಶನದ ಮೂಲಕ ನಡೆಯಲಿದೆ.
- ವೈದ್ಯಕೀಯ ಅಧಿಕಾರಿ (General Duty Medical Officer) – 864
- ಸಹಾಯಕ ವಿಭಾಗೀಯ ವೈದ್ಯಕೀಯ ಅಧಿಕಾರಿ – 450
- ದೆಹಲಿ ಮಹಾನಗರ ಪಾಲಿಕೆ – GDMO Grade-II – 30
- ನವದೆಹಲಿ ಮುನ್ಸಿಪಲ್ ಕೌನ್ಸಿಲ್ – MO – 14
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು MBBS ಪದವಿ ಪಡೆದಿರಬೇಕು. ಇದು ಭಾರತೀಯ ವೈದ್ಯಕೀಯ ಮಂಡಳಿ (National Medical Commission / MCI) ಮಾನ್ಯತೆ ಪಡೆದ ವೈದ್ಯಕೀಯ ಕಾಲೇಜುಗಳಿಂದ ಪಡೆದಿದ್ದು ಕಡ್ಡಾಯ.
ವಯೋಮಿತಿ: ಆಗಸ್ಟ್ 1, 2026ಕ್ಕೆ 32 ವರ್ಷ ಮೀರಿರಬಾರದು. ಅಂದರೆ ಆಗಸ್ಟ್ 2, 1994ರ ಹಿಂದಿನ ಜನನ ಅರ್ಹವಲ್ಲ. ಮೀಸಲಾತಿ ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಲಭ್ಯ
ಅರ್ಹ ಅಭ್ಯರ್ಥಿಗಳು upsconline.nic.in ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.
ಕೊನೆಯ ದಿನ: ಮಾರ್ಚ್ 31




























































