ಬೆಂಗಳೂರು: ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಅವರ ವಿರುದ್ಧ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರಿಗೆ 25ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ದೂರು ನೀಡಿದ್ದಾರೆಂಬ ಬೆಳವಣಿಗೆ ಪೊಲೀಸ್ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯ ಸಿಬ್ಬಂದಿ ಸಮೂಹವು ಸೆಪ್ಟೆಂಬರ್ 3ರಂದು ಎಡಿಜಿಪಿಗೆ ದೂರು ನೀಡಿದೆ ಎನ್ನಲಾಗಿದ್ದು, ಈ ಅಧಿಕಾರಿಯು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ. ನಿಯಮ ಬಾಹಿರವಾಗಿ ಶಿಸ್ತುಕ್ರಮಕ್ಕೆ ಮುಂದಾಗುತ್ತಾರೆ. ತಡರಾತ್ರಿವರೆಗೂ ಕಚೇರಿಯಲ್ಲಿಯೇ ಉಳಿಸಿಕೊಳ್ಳುತ್ತಾರೆ ಎಂದು ಈ ಸಿಬ್ಬಂದಿ ದೂರಿದ್ದಾರೆ.
ಕಹಿ ಸತ್ಯ..?
ಆದರೆ ವಾಸ್ತವವೇ ಬೇರೆ ಎಂಬುದು ಇನ್ನೂ ಕೆಲವು ಸಿಬ್ಬಂದಿಯ ವಾದ. ಡಿಸಿಪಿ ನಿಶಾ ಜೇಮ್ಸ್ ಅವರು ಕೆಲವು ವರ್ಷಗಳಿಂದ ಬೆಂಗಳೂರು ಕಮೀಷನರ್ ಕಚೇರಿಯಲ್ಲಿ ಉಪ ಪೊಲೀಸ್ ಆಯುಕ್ತರಾಗಿದ್ದು, ಯಾವುದೇ ಪ್ರಭಾವಿಗಳ ಒತ್ತಡಕ್ಕೂ ಮಣಿಯುವುದಿಲ್ಲ. ಹಾಗಾಗಿ ಅವರನ್ನು ಎತ್ತಂಗಡಿ ಮಾಡಲು ಈ ರೀತಿ ದೂರು ಕೊಡಿಸುವ ಪಿತೂರಿ ನಡೆದಿದೆ ಎಂದು ಸಹೋದ್ಯೋಗಿಗಳು ಹೇಳಿಕೊಂಡಿದ್ದಾರೆ.
Some Unhappy Ministerial staff and Some Police staff making false alligations, So we stand with Nisha James Madam IPS (share like and retweet )@bcpdcpadmn pic.twitter.com/s91LsVNynL
— Gajanan Hampiholi (@959_gaju) October 17, 2022
ಈ ನಡುವೆ, ‘ವಿ ಸಪೋರ್ಟ್ ನಿಶಾ ಜೇಮ್ಸ್’ ಅಭಿಯಾನ ಗಮನಸೆಳೆದಿದೆ. ಬೆಂಗಳೂರು ನಗರದ ಪೊಲೀಸ್ ಸಿಬ್ಬಂದಿ ಸಾಮಾಜಿಕ ಜಾಲತಾಣಗಳಲ್ಲಿ ಈ ಅಭಿಯಾನ ಕೈಗೊಂಡು ಮಹಿಳಾ ಪೊಲೀಸ್ ಅಧಿಕಾರಿಗೆ ಬೆಂಬಲ ಸೂಚಿಸಿದ್ದಾರೆ.
Madam Nisha James IPS is a really very honest and loyal police officer i have seen.
We will always take stand and support officers like madam at any point of situation. #DCPAdmin #IPS pic.twitter.com/5vZLvpo2Ah— Abdul Samad (@Abdul9599) October 17, 2022
ನಿಶಾ ಜೇಮ್ಸ್ ಅವರು ಆಡಳಿತ ವಿಭಾಗದ ಡಿಸಿಪಿಯಾದ ನಂತರ ಕಮೀಷನರ್ ಕಚೇರಿಯ ಆಡಳಿತ ವಿಭಾಗ ಶಿಸ್ತುಬದ್ಧವಾಗಿದೆ. ಅವರ ನಿಷ್ಟೂರ ನಡೆ ಪೊಲೀಸ್ ಇಲಾಖೆಗೆ ಮಾದರಿಯಾಗಿದೆ ಎಂದು ಅನೇಕ ಪೊಲೀಸ್ ಸಿಬ್ಬಂದಿ ಹೇಳಿಕೊಂಡಿದ್ದಾರೆ.
https://twitter.com/bennesoor/status/1581897317833404417?t=495lRv3l5ve2TcgSS04E2Q&s=19







































































