ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧದ ಕಮೀಷನ್ ಆರೋಪಗಳಿಗೆ ಗುದ್ದುಕೊಟ್ಟಿರುವ ಪ್ರತಿಪಕ್ಷ ಕಾಂಗ್ರೆಸ್ ಇದೀಗ, ‘PayCM ಈಗ SayCM ಆಗಲಿ ಎನ್ನುತ್ತಾ ಅಭಿಯಾನಕ್ಕೆ ಹೊಸ ಆಯಾಮ ನೀಡಿದೆ.
ಕೆಲವು ದಿನಗಳ ಹಿಂದೆ ‘ಪೇ ಸಿಎಂ’ ಅಭಿಯಾನ ಆರಂಭಿಸಿ ಬಿಜೆಪಿ ಪಾಲಿಗೆ ರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ತಂದಿಟ್ಟಿದ್ದ ಕೆಪಿಸಿಸಿ ನಾಯಕರು, ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಈ ಅಭಿಯಾನಕ್ಕೆ ವಿರಾಮ ನೀಡಿದ್ದರು. ಇದೀಗ ಯಾತ್ರೆ ರಾಜ್ಯದಿಂದ ಕ್ರಮಿಸುತ್ತಿದ್ದಂತೆಯೇ ಪ್ರದೇಶ ಕಾಂಗ್ರೆಸ್ ನಾಯಕರು ಬೊಮ್ಮಾಯಿ ಸರ್ಕಾರ ವಿರುದ್ದದ ‘ಪೇ ಸಿಎಂ’ ಅಭಿಯಾನಕ್ಕೆ ವೇಗ ತಂದಿದ್ದಾರೆ. ಅಷ್ಟೇ ಅಲ್ಲ, ಈ ವರೆಗೆ ‘ಪೇ ಸಿಎಂ’ ಆಗಿದ್ದ ಅಭಿಯಾನ ಇದೀಗ ‘ಸೇ ಸಿಎಂ’ ಎಂದು ವಿಸ್ತಾರಗೊಂಡಿದೆ.
#PayCM ಈಗ SayCM ಆಗಲಿ,
ರಾಜ್ಯದ ಜನತೆಗೆ ಉತ್ತರ ನೀಡಲಿ.ಚುನಾವಣೆಗೂ ಮೊದಲು ನೀಡಿದ ಭರವಸೆಗಳನ್ನು ಮರೆತು ವಚನಭ್ರಷ್ಟರಾದ @BJP4Karnataka ರಾಜ್ಯದ ಜನತೆಗೆ ಉತ್ತರ ನೀಡಬೇಕಿದೆ.
ತಮ್ಮದೇ ಪಕ್ಷದ ಪ್ರಣಾಳಿಕೆಯ ಭರವಸೆಗಳ ಬಗ್ಗೆ ಮಾತಾಡಲು ಕೂಡ 40% ಕಮಿಷನ್ ನೀಡಬೇಕೆ @BSBommai ಅವರೇ?#NimHatraIdyaUttara pic.twitter.com/0keKfjZcT2
— Karnataka Congress (@INCKarnataka) October 18, 2022
‘ರಾಜ್ಯದ ಜನತೆಗೆ ಉತ್ತರ ನೀಡಲಿ’ ಎಂದು ಟ್ವೀಟ್ ಮಾಡಿ ಈ ಅಭಿಯಾನವನ್ನು ಜಗಜ್ಜಾಹೀರು ಮಾಡಿರುವ ಕಾಂಗ್ರೆಸ್, ಚುನಾವಣೆಗೂ ಮೊದಲು ನೀಡಿದ ಭರವಸೆಗಳನ್ನು ಮರೆತು ವಚನಭ್ರಷ್ಟರಾದ ಬಿಜೆಪಿಯು ರಾಜ್ಯದ ಜನತೆಗೆ ಉತ್ತರ ನೀಡಬೇಕಿದೆ ಎಂದಿದೆ.
ತಮ್ಮದೇ ಪಕ್ಷದ ಪ್ರಣಾಳಿಕೆಯ ಭರವಸೆಗಳ ಬಗ್ಗೆ ಮಾತಾಡಲು ಕೂಡ 40% ಕಮಿಷನ್ ನೀಡಬೇಕೆ ಎಂದು ಕಾಂಗ್ರೆಸ್ ಪಕ್ಷವು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಪ್ರಶ್ನಿಸಿರುವ ವೈಖರಿಯೂ ಕುತೂಹಲಕ್ಕೀಡುಮಾಡಿದೆ.







































































