ದೆಹಲಿ: ಭಾನುವಾರ ದೆಹಲಿಯ ಇಂಡಿಯಾ ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಭಾರತೀಯ ಬುದ್ಧಿಜೀವಿಗಳ ಸಮ್ಮೇಳನದಿಂದ ‘ದಿ ಗ್ರೇಟ್ ಸನ್ ಆಫ್ ಇಂಡಿಯಾ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಛತ್ತೀಸ್‌ಗಢ ರಾಜ್ಯಪಾಲ ಬಿಸ್ವ ಭೂಷಣ ಹರಿಚರಣ್, ನಿವೃತ್ತ ಸುಪ್ರೀಂ ಕೋರ್ಟ ನ್ಯಾಯಾಧೀಶರಾದ ವಿ ಗೋಪಾಲ್ ಗೌಡರವರು ಉಪಸ್ಥಿತರಿದ್ದರು.
ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಗೋಪಾಲ್ ಗೌಡರವರ ಅಧ್ಯಕ್ಷತೆಯ ಇಂಡಿಯನ್ ಕಾನ್ಫರೆನ್ಸ್ ಆಫ್ ಇಂಟಲೆಕ್ಚುವಲ್ಸ್ ಸಂಸ್ಥೆಯಿಂದ ಕೊಡಮಾಡುವ “ಗ್ರೇಟ್ ಸನ್ ಆಫ್ ಇಂಡಿಯಾ“ ಪ್ರಶಸ್ತಿಗೆ ಭಾಜನರಾದ ಕರ್ನಾಟಕ ವಿಧಾಸಭೆಯ ಅಧ್ಯಕ್ಷರಾದ @utkhader ಅವರಿಗೆ ಅಭಿನಂದನೆಗಳು. pic.twitter.com/4FwsSl41uW
— Karnataka Congress (@INCKarnataka) July 16, 2023