ಬೆಂಗಳೂರು: ದಿವಂಗತ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದು ಪಕ್ಷ ತ್ಯಜಿಸುವ ಸಾಧ್ಯತೆಗಳಿವೆ ಎಂಬ ಸುದ್ದಿ ಕಮಲ ಪಾಳಯದಲ್ಲಿ ಹರಿದಾಡುತ್ತಿವೆ. ಈ ಸುದ್ದಿಯಿಂದ ಸ್ವತಃ ತೇಜಸ್ವಿ ಅವರೇ ಗಲಿಬಿಲಿಗೊಂಡಿದ್ದಾರೆ.
ಈ ಬಗ್ಗೆ ಸ್ಪಷ್ಟಪಡಿಸಿರುವ ಬಿಜೆಪಿ ಉಪಾಧ್ಯಕ್ಷರೂ ಆದ ಅವರು ಈ ಸುದ್ದಿ ನಿಜವಲ್ಲ ಎಂದಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು,’ದಯವಿಟ್ಟು ಊಹಾಪೋಹಗಳಿಗೆ ಕಿವಿಗೊಡಬೇಡಿ. ನಾನು ಭಾರತೀಯ ಜನತಾ ಪಕ್ಷದ ಜೊತೆಗೆ ಧೃಡವಾಗಿ ಇದ್ದೇನೆ ಎಂದಿದ್ದಾರೆ. ತಮ್ಮ ಅಭಿಪ್ರಾಯವನ್ನು ಮುಂದುವರಿಸಿರುವ ಅವರು, ಇಂಗ್ಲಿಷಿನಲ್ಲಿ ಹೇಳಬಹುದಾದರೆ, ‘I am wedded to the party and ideology – no compromise’ ಎಂದಿದ್ದಾರೆ.
ದಯವಿಟ್ಟು ಊಹಾಪೋಹಗಳಿಗೆ ಕಿವಿಗೊಡಬೇಡಿ. ನಾನು ಭಾರತೀಯ ಜನತಾ ಪಕ್ಷದ ಜೊತೆಗೆ ಧೃಡವಾಗಿ ಇದ್ದೇನೆ.
ಇಂಗ್ಲಿಷಿನಲ್ಲಿ ಹೇಳಬಹುದಾದರೆ,
" I am wedded to the party and ideology – no compromise "@BJP4India @BJP4Karnataka— Tejaswini AnanthKumar (ಮೋದಿಯ ಪರಿವಾರ) (@Tej_AnanthKumar) July 17, 2023