ಆಕ್ಸಿಜನ್ ದುರಂತ.. ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಳ.. ಆಸ್ಪತ್ರೆಗಳ ಬೆಡ್ ಕರ್ಮಕಾಂಡ.. ರೆಮ್‌ಡಿಸಿವಿರ್ ಔಷಧಿ ಅವಾಂತರ.. ಹೀಗೆ ಸಚಿವ ಸುಧಾಕರ್ ವೈಫಲ್ಯದ ಮಾರುದ್ದದ ಪಟ್ಟಿ ಬಗ್ಗೆ ಕಮಲ ಪಾಳಯದಲ್ಲೂ ಅತೃಪ್ತಿ..
ಬೆಂಗಳೂರು: ರಾಜ್ಯದಲ್ಲಿ ಆರೋಗ್ಯ ಇಲಾಖೆಯ ವೈಫಲ್ಯ ಮತ್ತೆ ಎದ್ದು ಕಾಣಿತ್ತಿದೆ. ಹಲವಾರು ಅವಾಂತರಗಳ ನಡುವೆ ಇದೀಗ ರೆಮ್‌ಡಿಸಿವರ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಔಷಧಗಳೇ ವಿಷವಾಗಲು ಯಾರ ನಿರ್ಲಕ್ಷ್ಯ ಕಾರಣ? ಎಂಬ ಪ್ರಶ್ನೆ ಇದೀಗ ಎಲ್ಲರನ್ನೂ ಕಾಡಿದೆ.
ಈ ನಡುವೆ, ಬೆಂಗಳೂರಿನ ಜೆ.ಸಿ.ನಗರ, ಸಂಜಯನಗರ, ಬಳ್ಳಾರಿ, ಮೈಸೂರು ಹೀಗೆ ರಾಜ್ಯದೆಲ್ಲೆಡೆ ನಕಲಿ ರೆಮ್‌ಡಿಸಿವಿರ್ ಔಷಧಗಳು ಮಾರಾಟವಗುತ್ತಿರುವ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳ ವೈಫಲ್ಯದಿಂದಾಗಿ ಈ ರೀತಿಯ ಕೃತ್ಯಗಳು ನಡೆಯುತ್ತಿವೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲೂ ಪ್ರತಿಧ್ವನಿಸಿದೆ.
ಆರೋಗ್ಯ ಇಲಾಖೆಯ ಕಾರ್ಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಈ ಕರ್ಮಕಾಂಡವನ್ನು ಪೊಲೀಸರು ಬಯಲಿಗೆಳೆಯುತ್ತಿದ್ದಾರೆ. ಆದರೂ ಆರೋಗ್ಯ ಸಚಿವ ಸುಧಾಕರ್ ಇನ್ನೂ ಗಾಢ ನಿದ್ದೆಯಲ್ಲಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕರದ್ದು.
ಸುಧಾಕರ್ ಬಗ್ಗೆ ಸಂಘ ಪರಿವಾರದ ಆಕ್ರೋಶ:
ಪ್ರಸ್ತುತ ಕೋವಿಡ್ ಸಂಕಟ ಕಾಲದಲ್ಲಿ ಆರ್‌ಎಸ್‌ಎಸ್ ಕೂಡಾ ಸೇವೆಗಿಳಿದಿದೆ. ಸೇವಾ ಭಾರತಿ ಮೂಲಕ ರಾಜ್ಯಾದ್ಯಂತ ಕೋವಿಡ್ ಸೋಂಕಿತರಿಗಾಗಿ ಸೇವಾ ಕೇಂದ್ರಗಳನ್ನು ತೆರೆದು ಸಂಘದ ಕಾರ್ಯಕರ್ತರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಆರೋಗ್ಯ ಸಚಿವ ಸುಧಾಕರ್ ಅವರು ಕರ್ತವ್ಯ ಪ್ರಜ್ಞೆ ಮರೆತಿದ್ದಾರೆ ಎಂಬುದು ಈ ಸೇವಾ ಭಾರತಿ ಕಾರ್ಯಕರ್ತರ ಅಭಿಪ್ರಾಯ.
ಇದನ್ನೂ ಓದಿ.. ಚಾಮರಾಜನಗರ ದುರಂತ.. ಸಚಿವ ಸುಧಾಕರ್ ರಾಜೀನಾಮೆಗೆ ಹೆಚ್ಚಿದ ಒತ್ತಡ
ಈ ಬಗ್ಗೆ ಉದಯ ನ್ಯೂಸ್ ಜೊತೆ ಮಾತನಾಡಿದ ಆರೆಸ್ಸೆಸ್ ನಾಯಕರು, ಆರೋಗ್ಯ ಇಲಾಖೆಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಆರೋಗ್ಯ ಸಚಿವರ ವೈಫಲ್ಯದ ಬಗ್ಗೆ ಸಂಘದ ಹಿರಿಯರಿಗೂ ತಿಳಿದಿದೆ ಎನ್ನುತ್ತಿರುವ ಈ ಆರೆಸ್ಸೆಸ್ ಸೇನಾನಿಗಳು, ಸಚಿವ ಸುಧಾಕರ್ ರಾಜೀನಾಮೆಯ ಹೊರತಾಗಿ ವ್ಯವಸ್ಥೆ ಸುದಾರಣೆಯಾಗಲ್ಲ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.