ಮಾಸ್ಕೋ: ರಷ್ಯಾದ ಮಾಸ್ಕೋ ಪ್ರದೇಶದಲ್ಲಿ ಭಾನುವಾರ ನಡೆದ ಡ್ರೋನ್ ದಾಳಿಯಲ್ಲಿ ಒಬ್ಬ ಭಾರತೀಯ ಕಾರ್ಮಿಕ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ದಾಳಿಯ ಬಳಿಕ ರಾಯಭಾರ ಕಚೇರಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಭಾರತೀಯ ಕಾರ್ಮಿಕರನ್ನು ಭೇಟಿಯಾಗಿದ್ದಾರೆ. ಗಾಯಗೊಂಡವರಿಗೆ ಅಗತ್ಯ ನೆರವು ಒದಗಿಸಲು ಸಂಬಂಧಿತ ಕಂಪನಿ ಹಾಗೂ ಸ್ಥಳೀಯ ಆಡಳಿತದೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ರಾಯಭಾರ ಕಚೇರಿ ಸಾಮಾಜಿಕ ಜಾಲತಾಣ X ನಲ್ಲಿ ಮಾಹಿತಿ ನೀಡಿದೆ.
ಇದೇ ವೇಳೆ, ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ (Volodymyr Zelenskyy) ರಷ್ಯಾದ ಮೇಲೆ ನಡೆಯುತ್ತಿರುವ ದಾಳಿಗಳು ಯುದ್ಧದ ಪ್ರತಿಕ್ರಿಯೆಯ ಭಾಗವೆಂದು ಹೇಳಿದ್ದಾರೆ. “ರಷ್ಯಾ ಯುದ್ಧ ಮುಂದುವರಿಸಿರುವುದರಿಂದ ನಮ್ಮ ಪ್ರತಿಕ್ರಿಯೆಗಳು ಸಮರ್ಥನೀಯವಾಗಿವೆ. ಈ ಬಾರಿ ಉಕ್ರೇನ್‌ನ ದೀರ್ಘ-ಶ್ರೇಣಿಯ ದಾಳಿಗಳು ಮಾಸ್ಕೋ ಪ್ರದೇಶವನ್ನೂ ತಲುಪಿವೆ” ಎಂದು ಅವರು X ನಲ್ಲಿ ಬರೆದುಕೊಂಡಿದ್ದಾರೆ.
ಮೇ 8 ರಿಂದ 11ರವರೆಗೆ ಜಾರಿಯಲ್ಲಿದ್ದ ತಾತ್ಕಾಲಿಕ ಕದನ ವಿರಾಮದ ಬಳಿಕ ರಷ್ಯಾ ಮತ್ತು ಉಕ್ರೇನ್ ಮತ್ತೆ ಪರಸ್ಪರ ದಾಳಿಗಳನ್ನು ಆರಂಭಿಸಿವೆ. ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಾರ, ಕದನ ವಿರಾಮ ಅವಧಿಯಲ್ಲಿ ಉಕ್ರೇನ್ 30 ಸಾವಿರಕ್ಕೂ ಹೆಚ್ಚು ಉಲ್ಲಂಘನೆಗಳನ್ನು ನಡೆಸಿದೆ ಎಂದು ಆರೋಪಿಸಲಾಗಿದೆ.
💥Shahed down!
📹: 208th Anti-aircraft Missile Brigade pic.twitter.com/ukM4mBYd74
— Defense of Ukraine (@DefenceU) May 17, 2026























































