ಮಂಗಳೂರು: ಬಂಟ್ವಾಳ ಸಮೀಪದ ಪಾಣೆಮಂಗಳೂರು ವೀರ ವಿಠ್ಠಲ ದೇವಸ್ಥಾನ ಇಂದು ವಿಶೇಷ ಕೈಂಕರ್ಯಕ್ಕೆ ಸಾಕ್ಷಿಯಾಯಿತು. ಶ್ರೀ ವೀರ ವಿಠ್ಠಲ ವೆಂಕಟರಮಣ ಸ್ವಾಮಿ ದೇವಸ್ಥಾನನಲ್ಲಿ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಶ್ರೀ ದೇವರಿಗೆ ಶತ ಕಲಶಾಭಿಷೇಕ ನೆರವೇರಿಸಿದರು.

ವಿವಿಧ ಅಭಿಷೇಕ ಕೈಂಕರ್ಯ, ಶತಕಲಶಾಭಿಷೇಕ, ಗಂಗಾಭಿಷೇಕದ ಅಪೂರ್ವ ಕ್ಷಣಗಳನ್ನು ನೆರೆದಿದ್ದ ಭಕ್ರರು ಕ್ಣುಂಬಿಕೊಂಡು ಪುನೀತರಾದರು.
ಇದೇ ಸಂದರ್ಭದಲ್ಲಿ ನಾಡಿನ ಹತ್ತು ಸಮಸ್ತರ ಪರವಾಗಿ ಶ್ರೀದೇವರಿಗೆ ಸ್ವರ್ಣ ಮಾಲೆ ಅರ್ಪಿಸಲಾಯಿತು.
ದೇವಾಲಯದ ಆಡಳಿತ ಮೊಕ್ತೇಸರರಾದ ಪಿ . ರಘುವೀರ್ ಭಂಡಾರ್ಕಾರ್ , ವಿಶ್ವನಾಥ್ ಶೆಣೈ , ಪ್ರಭಾಕರ್ ಪೈ , ಉದ್ಯಮಿ ಡಾ.ಎಂ.ಜಗನ್ನಾಥ್ ಶೆಣೈ ಹಾಗೂ ಅನೇಕ ಗಣ್ಯರು ಈ ಕೈಂಕರ್ಯದ ಸನ್ನಿವೇಶಗಳಲ್ಲಿ ಭಾಗಿಯಾದರು.
ಚಿತ್ರ : ಮಂಜು ನೀರೇಶ್ವಾಲ್ಯ