ಮಂಗಳೂರು: ಬಂದರು ನಗರಿ ಮಂಗಳೂರು ಮತ್ತೊಂದು ಮಹಾ ಕೈಂಕರ್ಯಕ್ಕೆ ಸಾಕ್ಷಿಯಾಗಲಿದೆ.
ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರತೀರ್ಥರ ದಿಗ್ವಿಜಯ ಮಹೋತ್ಸವವು ಕಾರ್‌ಸ್ಟ್ರೀಟ್ ವೆಂಕಟರಮಣ ದೇವಾಲಯದಲ್ಲಿ ಶನಿವಾರ ವಿಜೃಂಭಣೆಯಿಂದ ಜರುಗಲಿದೆ. ಅಂದು ರಾತ್ರಿ 7.00 ಗಂಟೆಗೆ ಶ್ರೀಗಳವರ ದಿಗ್ವಿಜಯ ಶೋಭಾಯಾತ್ರೆ ಶ್ರೀ ದೇವಳದಿಂದ ಹೊರಟು ಮಹಾಮಾಯಾ ದೇವಳ , ನವಭಾರತ್ ಸರ್ಕಲ್, ಡೊಂಗರಕೇರಿ ಮೂಲಕ ನ್ಯೂ ಚಿತ್ರ ಜುಂಕ್ಷನ್ ನಿಂದ ಎಡಬದಿಗೆ ತಿರುಗಿ ಸ್ವದೇಶಿ ಸ್ಟೋರ್ ಮೂಲಕ ಸಾಗಿ ಶ್ರೀದೇವಳಕ್ಕೆ ತಲುಪಲಿದೆ.
ಮಧ್ಯಾಹ್ನ ಪೊಜೆಯ ಬಳಿಕ ಸಮಾರಾಧನೆ ಎರ್ಪಡಿಸಲಾಗಿದೆ, ಪರವೂರಿನಿಂದ ಆಗಮಿಸುವ ಭಜಕರಿಗೆ ಶ್ರೀಗಳು ನವಭಾರತ್ ಸರ್ಕಲ್ ಬಳಿ ಫಲ, ಮಂತ್ರಾಕ್ಷತೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಮಂಗಳೂರಿನ ಸಮಾಜ ಭಾಂದವರು ಡೊಂಗರಕೇರಿ, ನ್ಯೂ ಚಿತ್ರ ಹಾಗೂ ಶ್ರೀ ದೇವಳದ ಮುಂಭಾಗದಲ್ಲಿ ಶ್ರೀಗಳವರಿಂದ ಫಲ, ಮಂತ್ರಾಕ್ಷತೆ ಪಡಕೊಳ್ಳಬಹುದು ಎಂದು ದೇವಾಲಯದ ಆಡಳಿತ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.