ಪರಮಾತ್ಮನಲ್ಲಿ ಶ್ರೀ ಗುರು ಸೇವಾ ಚಿಂತನೆ- ಸ್ವಭಾವ- ಉತ್ಸಾಹ ನಮ್ಮದಾಗಬೇಕು, ವಿಶ್ವಕ್ಕೆ ಬಂದ ಮಹಾಮಾರಿ -ಬಾದ್ಯದಿಗಳು ದೂರವಾಗಬೇಕು. ಸರ್ವರಿಗೂ ವಿದ್ಯಾ – ಧನ -ಆಯುರಾರೋಗ್ಯ-ಭಾಗ್ಯಾದಿಗಳು ಲಭಿಸಿ, ವರ್ಧಿಸಿ, ಸುಖ ಲಭಿಸುವಂತೆ ನಿರಂತರ ಶ್ರೀವೀರ ವೇಂಕಟೇಶ ದೇವಾಲಯದ ಅರ್ಚಕ, ತಂತ್ರಿ, ಆಡಳಿತ, ಗ್ರಾಮ ಜನರಕಳಕಳಿಯ ಪ್ರಾರ್ಥನೆ.
ಮಂಗಳೂರು: ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನವು ರಥೋತ್ಸವದ ದ್ವಿಶತಮಾನೋತ್ಸವ ಸಂಭ್ರಮದ ಸಡಗರದಲ್ಲಿದೆ.
ತೇರನ್ನೇರಿ ಬೀದಿ ಮೆರೆವ ವೀರ ವೇಂಕಟೇಶನ ನೋಡದಾ ಕಣ್ಗಳೀವ್ಯಾತಕೋ ದಾಸರು ಸ್ತುತಿಸಿ ನಮಿಸಿದ ದೇವಾದಿ ದೇವ ಶ್ರೀ ವೆಂಕಟೇಶ ನಮ್ಮ ಗೌಡ ಸಾರಸ್ವತ ಸಮಾಜದ ಸ್ವಂತ ದೇವರು. ನಮ್ಮ ಭಾರ್ಗವ ಋಷಿಯ ಪಾದ ತಾಡನದ ನೆಪದಿಂದ ಭೂವೈಕುಂಠ ಉಂಟಾದದ್ದು. ನಮ್ಮ ಗೋತ್ರದ ಮಹಾಋಷಿ ಪರಂಪರೆಯು, ಕಲಿಯುಗ ವರದ ವೆಂಕಟಾಚಲಾಧೀಶನ ಮೂಲ ಅವತಾರದ ಕಾರಣ, ನಮ್ಮ ಸಮಾಜಕ್ಕೆ ಅನುಗ್ರಹ ಮಾಡಲೆಂದು ನೆಪ ಮಾತ್ರದಿಂದ ಹಲವು ಊರಿನಲ್ಲಿಪ್ರಾಪ್ತವಾದ ವೆಂಕಟೇಶನಿಗೆ ಭವ್ಯ ದೇವಾಲಯ-ಉತ್ಸವಗಳು, ನಮ್ಮ ದೇವರಿಗೆ ನಮ್ಮ ಸಂಪ್ರದಾಯದಂತೆ ನಡೆದು ಬಂದು, ಸಮಾಜ ಉದ್ಧಾರಕ್ಕೆ ಕಾರಣವಾಗಿವೆ. ಇದರಲ್ಲಿ ಶ್ರೀ ಕಾಶೀಮಠಾಧೀಶರಾಗಿ ಪೀಠ ವಿರಾಜಿತ ನಮ್ಮ ಧರ್ಮಾಚಾರ್ಯರ ಭವ್ಯ ತಪೋನಿಷ್ಠ ಗುರುಪರಂಪರೆ, ಪ್ರಸ್ತುತ ಪೀಠಾಧೀಶರಾದ ಶ್ರೀಮದ್ಸಂಯಮೀಂದ್ರ ತೀರ್ಥರು ಗುರುಸೇವಾ-ಗುರುಸ್ತೋತ್ರ, ಗುರು ಮಹಿಮಾ ಸಮಾಜಕ್ಕೆ ತಿಳಿಸಿ ನಡೆಸುತ್ತಿರುವ ಸಂಯಮದ ಸಾಕಾರ ಮೂರ್ತಿಗಳೆಂದರೆಅತಿಶಯೋಕ್ತಿ ಆಗದು.
ದ್ವಿಶತಮಾನೋತ್ಸವ ನವ ದೇವಾಯಲ ಪ್ರತಿಷ್ಠೆ ಸ್ವರ್ಣ ಗರುಡ ವಾಹನ , ರಜತ ರಥಾದಿ ಅರ್ಪಣೆ ಸಹಿತ ವಿಶೇಷ ಪ್ರಗತಿ ಸಾಧಿಸಿದ ಶ್ರೀ ವೆಂಕಟರಮಣ ದೇವಾಲಯ ಮಂಗಳೂರಿನಲ್ಲಿ, ಈಗ ರಥೋತ್ಸವದ ದ್ವಿಶತಮಾನೋತ್ಸವ ಸಂಭ್ರಮ. ರಥೋತ್ಸವದ ದ್ವಿಶತಮಾನೋತ್ಸವದ ಪೂರ್ವ ೦ಗ ಎಂಬಂತೆ ಶ್ರೀಗಳು ಮಾರ್ಗದರ್ಶನ ನೀಡಿದಂತೆ ಚಂಡಿಕಾ ಹವನ, ವಾಯುಸ್ತುತಿ ಹವನ, ನಮಸ್ಕಾರ, ಗಾಯತ್ರಿ ಹವನ- ಶ್ರೀ ಸಂಸ್ಥಾನದ ದೇವರಿಗೆ ನಿತ್ಯ ಲಘುವಿಷ್ಣುಅಭಿಷೇಕ ದೇವಾಲಯದಲ್ಲಿ ವಿವಿಧ ಉತ್ಸವ- ಬಾಲವಟು- ಕುಮಾರಿ ಬಾಲ ಪೂಜಾದಿಗಳು, ಲಕ್ಷಪ್ರದಕ್ಷಿಣೆ, ಲಕ್ಷತುಳಸೀ ಅರ್ಚನೆ- ಲಕ್ಷ ಕುಂಕುಮಾರ್ಚನೆ- ನಿತ್ಯಭಜನಾ ಸ್ತೋತ್ರ ಸಂಗೀತಾದಿಗಳ ಘೋಷ ತುಂಬಿದ ಶ್ರೀ ವೆಂಕಟರಮಣ ದೇವಾಲಯದಲ್ಲಿ ಶ್ರೀಗುರು ಸುಧೀಂದ್ರ ತೀರ್ಥ ಶ್ರೀ ಪಾದಂಗಳವರ ಪುಣ್ಯತಿಥಿಯಪಂಚಮ ವರ್ಷದ ಆರಾಧನೆ, ಸತತ ಮೂರು ದಿನಗಳ ಪರ್ಯಂತ ಪ್ರಪ್ರಥಮವಾಗಿ ದಕ್ಷಿಣ ಭಾರತದ ದಕ್ಷಿಣ ಕರ್ನಾಟಕದ ಮಂಗಳೂರಿನಲ್ಲಿ ಸಂಪನ್ನವಾಯಿತು. ಶ್ರೀದೇವರ ಸಮ್ಮುಖ ನವ ಅಶ್ವತ್ಥ ವೃಕ್ಷಾ ರೂಪಣೆಯ ನಿರ್ಧಾರ, ಶ್ರೀದೇವರ 200 ರಥಾರೋಹಣೆ ಕಂಡ ಬ್ರಹ್ಮರಥದ ನವ ನಿರ್ಮಾಣ ನಿರ್ಧಾರ, ವ್ಯವಸ್ಥಿತ ರೀತಿಯಲ್ಲಿಎಲ್ಲಾ ಕಾರ್ಯಕ್ರಮಗಳ ಸಂಯೋಜನೆ, ಶ್ರೀಗುರು ಕೃಪಾ ಆರ್ಶಿವಾದ. 12.02.2021 ನಮ್ಮ ಸಮಾಜದ ಉನ್ನತಿ ಸಾಧಿಸಿದ ಶ್ರೀಮದ್ ಭುವನೇಂದ್ರ ತೀರ್ಥರ ಗುರುವರೇಣ್ಯರಾದ ಶ್ರೀಮದ್ ಸುಮತೀಂದ್ರ ಶ್ರೀಪಾದಂಗಳವರ ಪುಣ್ಯತಿಥಿಯ ಪರ್ವಕಾಲದಲ್ಲಿ ಸಂಜೆ ಶ್ರೀಗಳಿಂದ ಪ್ರವಚನಾಶೀರ್ವಾದ ಪೂರ್ವಾಕ ಶ್ರೀ ಕ್ಷೇತ್ರ ಹರಿದ್ವಾರದಲ್ಲಿ ನಡೆಯುವ ವಸಂತ ಮಾಸದ ಹಾಗೂ ಶ್ರೀವೀರವೇಂಕಟೇಶ ದೇವರ ನೂತನ ರಥ ನಿರ್ಮಾಣದ ಸೂಚನಾ ಪತ್ರಿಕೆಗಳ ಪ್ರಕಟಣೆ. ಶ್ರೀ ಗುರುಕೃಪಾ ಅನುಗೃಹ – ಸಮಗ್ರ ಸಮಾಜಕ್ಕೆ ಅನುಗ್ರಹಿಸುವ ಶಾರ್ವರಿ ಸಂವತ್ಸರದ ಶ್ರೀ ಸಂಸ್ಥಾನದ ದಿಗ್ವಿಜಯ 13.02.2021 ರಂದು ಸಸಂಭ್ರಮ ನಡೆಯಲಿದೆ.
“ಆಸುಫಲಮಂತ್ರಾಕ್ಷತೆಯ ಹರಸಿ” ಸುಫಲ-ಮಂತ್ರಾಕ್ಷತೆ ಯನ್ನು ಶಿಷ್ಯ ಸಮುದಾಯಕ್ಕೆ ದಂಡಧಾರಿಗಳಾಗಿ, ದಿಗ್ವಿಜಯ, ರಥಾರೂಡರಾಗಿ, ಸರ್ವರಿಗೂ ಅನುಗ್ರಹಿಸುವಶ್ರೀಗಳು ಶ್ರೀವೀರ ವೇಂಕಟೇಶ ರಥೋತ್ಸವ ಸಮಯದಲ್ಲೂ ರಥಾರೂಢರಾಗುವರು. 14.02.2021 ಶ್ರೀಗಳವರಿಂದ ಮಂಗಳಾಶೀರ್ವಾದದ ಕಾರ್ಯಕ್ರಮ , ಮಹಾಸಭಾ ಕಾರ್ಯಕ್ರಮ ಶ್ರೀ ಗುರುರಥ, ಶ್ರೀ ಹರಿಗುರು ರಥೋತ್ಸವಗಳು ನಮ್ಮ ಸಮಾಜಕ್ಕೆ ಒಂದೇ ಊರಿನಲ್ಲಿ ಒಂದೇ ದೇವಾಲಯದಲ್ಲಿ ದೊರೆತದ್ದು ವಿಶೇಷ ಇತಿಹಾಸ. ಶ್ರೀ ಗುರುಗಳಸುಧೀರ್ಘವಾಗಿ ನಡೆದ ಒಂದು ಮಾಸದ ಮೊಕ್ತಾಂ ಸಂದರ್ಭದಲ್ಲಿ, ನಮ್ಮ ಸಮಾಜ ಸದಾ ಗೃಹಸ್ಥರಿಂದ- ಕುಮಾರಿ ವಟು- ಸುಮಂಗಲೆಯರ ಪೂಜನಾದಿಗಳು ನಮ್ಮ ಸಮಾಜವು ಸದಾ ಧರ್ಮವಂತರಾಗಿ ಸದಾ ರಾರಾಜಿಸುವ ಬಗ್ಗೆ ವಿಶೇಷ ಪ್ರಾರ್ಥನಾ ಪೂರ್ವಕ ನಡೆಯಿತು. ಪರಮಾತ್ಮನಲ್ಲಿ ಶ್ರೀ ಗುರು ಸೇವಾಚಿಂತನೆ- ಸ್ವಭಾವ- ಉತ್ಸಾಹ ನಮ್ಮದಾಗಬೇಕು, ವಿಶ್ವಕ್ಕೆ ಬಂದ ಮಹಾಮಾರಿ -ಬಾದ್ಯದಿಗಳು ದೂರವಾಗಬೇಕು. ಸರ್ವರಿಗೂ ವಿದ್ಯಾ – ಧನ -ಆಯುರಾರೋಗ್ಯ-ಭಾಗ್ಯಾದಿಗಳು ಲಭಿಸಿ, ವರ್ಧಿಸಿ, ಸುಖ ಲಭಿಸುವಂತೆ ನಿರಂತರ ಶ್ರೀವೀರ ವೇಂಕಟೇಶ ದೇವಾಲಯದ ಅರ್ಚಕ, ತಂತ್ರಿ, ಆಡಳಿತ, ಗ್ರಾಮ ಜನರಕಳಕಳಿಯ ಪ್ರಾರ್ಥನೆ.