ದೆಹಲಿ: ದೇಶದಲ್ಲಿ ಮತ್ತೆ ಲಾಕ್‌ಡೌನ್ ಜಾರಿಯಾಗುತ್ತಾ..? ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯ ಸ್ವಾಮಿ ಮಾಡಿರುವ ಟ್ವೀಟ್ ನಂತರ ಇಂಥದ್ದೊಂದು ಚರ್ಚೆ ಆರಂಭವಾಗಿದೆ.
ಕೋವಿಡ್ 19 ವೈರಾಣು ಹಾವಳಿ ಕಡಿಯಾಯಿತು ಎನ್ನುವಷ್ಟರಲ್ಲಿ ಮೂರನೇ ಅಲೆಯ ಆತಂಕ ಎದುರಾಯಿತಾದರೂ ಲಸಿಕಾ ಅಭಿಯಾನ ಅಂಥದ್ದೊಂದು ಗಂಡಾಂತರದಿಂದ ದೇಶವನ್ನು ಪಾರು ಮಾಡಿದೆ. ಆದರೆ ಇದೀಗ ವಕ್ಕರಿಸಿರುವ ‘ಒಮೈಕ್ರಾನ್’ ಮತ್ತೊಮ್ಮೆ ಈ ದೇಶದ ಜನರನ್ನು ಭೀತಿಯ ಕೂಪಕ್ಕೆ ತಳ್ಳಿದೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಒಮೈಕ್ರಾನ್ ಪ್ರಕರಣಗಳು ಶರವೇಗದಲ್ಲಿ ಹೆಚ್ಚುತ್ತಿದ್ದು, ಈಗಾಗಲೇ ಹಲವಾರು ದೇಶಗಳು ಲಾಕ್‌ಡೌನ್ ಘೋಷಿಸಿವೆ. ಭಾರತದಲ್ಲೂ ಒಮೈಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವುದರಿಂದಾಗಿ ಪ್ರಧಾನಿ ಸಹಿತ ದೇಶದ ಪ್ರಮುಖರು ಚಿಂತಾಕ್ರಾಂತರಾಗಿದ್ದಾರೆ.
ಈ ನಡುವೆ ಭಾರತದಲ್ಲೂ ಲಾಕ್‌ಡೌನ್ ಜಾರಿಯಾಗುವ ಸಾಧ್ಯತೆಗಳ ಬಗ್ಗೆ ಬಿಜೆಪಿ ಸಂಸದ ಸುಬ್ರಹ್ಮಣ್ಯ ಸ್ವಾಮಿ ಸುಳಿವು ನೀಡಿದ್ದಾರೆ. ಈ ಕುರಿತಂತೆ ಅವರು ಮಾಡಿರುವ ಟ್ವೀಟ್ ಚರ್ಚೆಗೆ ಎಡೆಮಾಡಿಕೊಟ್ಟಿದೆ.
‘ಒಮೈಕ್ರಾನ್ ಕಾರಣದಿಂದಾಗಿ ದೇಶದಲ್ಲಿ ಲಾಕ್‌ಡೌನ್ ಜಾರಿಯಾಗಬಹುದು ಎಂದವರು ಪೋಸ್ಟ್ ಹಾಕಿದ್ದಾರೆ. ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಿ ಚುನಾವಣೆಯನ್ನು ಸೆಪ್ಟೆಂಬರ್‌ವರೆಗೆ ಮುಂದೂಡಲೂಬಹುದು. ಈ ವರ್ಷ ಮಾಡದ್ದನ್ನು ಮುಂದಿನ ವರ್ಷದ ಆರಂಭದಲ್ಲಿ ಮಾಡಬಹುದು’ ಎಂದೂ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯ ಸ್ವಾಮಿ ಅವರು ಒಗಟಿನ ರೂಪದಲ್ಲಿ ಮಾಡಿರುವ ಟ್ವೀಟ್ ತೀವ್ರ ಸಂಚಲನ ಸೃಷ್ಟಿಸಿದೆ.
Don’t be surprised by a Lockdown for Omicron and postponement of UP elections to September under President Rule in UP. What could not directly be done earlier this year can be then done indirectly early next year
— Subramanian Swamy (@Swamy39) December 23, 2021


















































