ಗದಗ: ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ರೀತಿ ನಿಯಮ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಹಳ್ಳಿಗಾಡಿನಲ್ಲಿ ನಾಟಿ ಕೋಳಿಗೆ ಡಿಮ್ಯಾಂಡೋ ಡಿಮ್ಯಾಂಡ್..
ಗದಗ ಜಿಲ್ಲೆ ರೋಣ ಪಟ್ಟಣದಲ್ಲಂತೂ ನಾಟಿ ಕೋಳಿ ವ್ಯಾಪಾರ ಅ್ಲಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದರ. ಕೊರೊನಾ ಸೋಂಕಿತರು ನಾಟಿ ಕೋಳಿ ಖಾದ್ಯ ತಿಂದರೆ ರೋಗನಿರೋಧಕ ಶಕ್ತಿ ಹೆಚ್ಚಳವಾಗುತ್ತೆ ಎಂಬ ಸಲಹೆ ಹಲವರಿಂದ ವ್ಯಕ್ತವಾಗುತ್ತಿದೆಯಂತೆ. ಹಾಗಾಗಿ ಆ ಊರಲ್ಲಿ ನಾಟಿ ಕುಕ್ಕುಟ ಖರೀದಿ ಹೆಚ್ಚಾಗಿದೆ.
‘ನಾಟಿ ಕೋಳಿ ಕರಿ ತಿಂದರೆ ರೋಗ ನಿರೋಧಕ ಶಕ್ತಿ ವೃದ್ಧಿಸಲು ಸಹಕಾರಿ ಅನ್ನೋ ವೈದ್ಯರು ಸಲಹೆ ನೀಡಿದ್ದಾರೆ ಎನ್ನುತ್ತಿರಿವ ಜನ, ಹಳ್ಳಿಗಳಿಂದ ಬೆಳ್ಳಂ ಬೆಳಿಗ್ಗೆ ಪಟ್ಟಣಕ್ಕೆ ಬರೋ ಕೋಳಿ ಮಾರಾಟಗಾರರ ಬಳಿ ಮುಗಿಬೀಳುತ್ತಿದ್ದಾರೆ. ಬೆಳಿಗ್ಗೆ 6-10 ಗಂಟಡಯೊಳಗೆ ಮಾರಾಟಕ್ಕೆ ಅವಕಾಶ ಇದ್ದರೆ ಈ ಊರಲ್ಲಿ ಬೆಳಿಗ್ಗೆ 8 ಗಂಟೆ ಆಯಿತೆಂದರೆ ಸಾಕು, ಅಷ್ಟರಲ್ಲೇ ಲೋಡ್‌ಗಟ್ಟಲೆ ಕೋಳಿಗಳು ಚೌಕಾಸಿ ಇಲ್ಲದೆ ಮಾರಾಟವಾಗುತ್ತಿದೆಯಂತೆ. ಈ ಪರಿಸ್ಥಿತಿ ವರ್ತಕರಿಗೂ ಖುಷಿ ತಂದಿದೆ. ಕಳೆದ ವರ್ಷ ಒಂದು ನಾಟಿ ಕೋಳಿಗೆ 250 ರೂ.ಈ ವರ್ಷ 400 ರೂಪಾಯಿಗು ಅಧಿಕ ಬೆಲೆ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಕೊಂಚ ದುಬಾರಿ ಎನಿಸಿದರೂ ಖರಿದೀಸುವವರ ಸಂಖ್ಯೆ ಹೆಚ್ಚಾಗಿದೆ.
ನಾಟಿ ಕೋಳಿ ಮಾಂಸದಲ್ಲಿ ಪ್ರೊಟಿನ್ ವಿಟಮಿನ್ ಅಂಶ ಹೆಚ್ಚು ಇರುವ ಕಾರಣ ದೇಹದ ಮಾಂಸಖಂಡಗಳು ಗಟ್ಟಿಯಾಗಿ ಕೊರೊನಾ ವಿರುದ್ಧ ಹೋರಾಟ ಮಾಡುತ್ತದೆ ಎಂಬ ಸಲಹೆಯನ್ನು ಯಾರು ಕೊಟ್ರೋ ಗೊತ್ತಿಲ್ಲ. ಆದರೆ ಈ ಮಾಹಿತಿ ಹರಿದಾಡಿ ಈ ಹಳ್ಳಿಯ ಜನ ಮಾತ್ರ ಲಸಿಕೆಗಿಂತ ಕೋಳಿಯನ್ನೇ ನೆಚ್ಚಿಕೊಂಡಿದ್ದಾರೆ.