ಕೋಲ್ಕತ್ತಾ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಹೊರಬರುತ್ತಿರುವ ಹಿನ್ನೆಲೆಯಲ್ಲಿ, ತೀವ್ರ ಕುತೂಹಲ ಕೆರಳಿಸಿದ್ದ ಪಶ್ಚಿಮ ಬಂಗಾಳದಲ್ಲಿ ಹೊಸ ಯುಗದ ಆರಂಭಕ್ಕೆ ಮತದಾರರು ಮುನ್ನುಡಿ ಬರೆದಿದ್ದಾರೆ ಎಂಬುದು ಇತ್ತೀಚಿನ ಎಣಿಕೆಯಿಂದ ಸ್ಪಷ್ಟವಾಗುತ್ತಿದೆ.
ಮತ ಎಣಿಕೆ ಆರಂಭವಾದ ಕ್ಷಣದಿಂದಲೇ ಭಾರತೀಯ ಜನತಾ ಪಕ್ಷವು ಭಾರೀ ಮುನ್ನಡೆ ಕಾಯ್ದುಕೊಂಡಿದ್ದು, ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆಯ ಸೂಚನೆ ಕಾಣಿಸುತ್ತಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವು ನಿರೀಕ್ಷೆಗಿಂತಲೂ ಹೆಚ್ಚಿನ ಹಿನ್ನಡೆ ಅನುಭವಿಸುತ್ತಿದ್ದು, ಪಕ್ಷದ ಹಲವಾರು ಪ್ರಭಾವಿ ನಾಯಕರು ಕೂಡ ಪರಾಭವದ ಅಂಚಿನಲ್ಲಿದ್ದಾರೆ.
294 ಸ್ಥಾನಗಳ ಪೈಕಿ 195 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಪಶ್ಚಿಮ ಬಂಗಾಳದ ರಾಜಕೀಯ ಚಿತ್ರಣ ಬದಲಾಗುತ್ತಿರುವ ಇಂದಿನ ಈ ಫಲಿತಾಂಶಗಳು ಮುಂದಿನ ದಿನಗಳಲ್ಲಿ ರಾಜ್ಯದ ಆಡಳಿತ, ರಾಜಕೀಯ ತಂತ್ರ ಮತ್ತು ಪಕ್ಷಗಳ ಒಳಚರ್ಚೆಗಳಿಗೆ ಮಹತ್ತರ ಪ್ರಭಾವ ಬೀರಲಿವೆ ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.




















































