ತಿರುವನಂತಪುರಂ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಪೈಕಿ ಕೇರಳದಲ್ಲೂ ಜನರು ಬದಲಾವಣೆ ಬಯಸಿರುವುದು ಈ ಬಾರಿಯ ಫಲಿತಾಂಶಗಳಿಂದ ಸ್ಪಷ್ಟವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಬೆಂಬಲಿತ UDFಗೆ ಜನತೆ ಬಹುಮತ ನೀಡಿದ್ದು, ಆಡಳಿತಾರೂಢ LDFಗೆ ಮತದಾರರು ಸೋಲಿನ ರುಚಿ ನೀಡಿದ್ದಾರೆ.
140 ವಿಧಾನಸಭಾ ಕ್ಷೇತ್ರಗಳ ಪೈಕಿ UDF 102 ಕಡೆ ಮುನ್ನಡೆ ಸಾಧಿಸಿದ್ದು, ಸರ್ಕಾರ ರಚಿಸಲು ಅಗತ್ಯವಾದ 71 ಸ್ಥಾನಗಳನ್ನು ಬಹಳ ಮಟ್ಟಿಗೆ ಮೀರಿದೆ. ಆಡಳಿತಾರೂಢ LDF 36 ಕಡೆ ಮುನ್ನಡೆ ಸಾಧಿಸಿದೆ.
ಕೇರಳ ರಾಜ್ಯದಲ್ಲಿ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದ BJP ಈ ಬಾರಿ 2 ಕಡೆ ಮಾತ್ರ ಮುನ್ನಡೆಯಲ್ಲಿದೆ, ಇದು ಪಕ್ಷದ ಹೋರಾಟಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕೇರಳದಲ್ಲಿ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಸ್ಪಷ್ಟವಾಗಿ ಸರ್ಕಾರ ಬದಲಾವಣೆಯ ತೀರ್ಮಾನ ಕೈಗೊಂಡಿದ್ದು, ಅಂತಿಮ ಎಣಿಕೆಯಲ್ಲಿ ಕೂಡ ಇದೇ ಬಲಾಬಲ ಮುಂದುವರಿಯುವ ನಿರೀಕ್ಷೆ ವ್ಯಕ್ತವಾಗಿದೆ.







































































