ಬೆಂಗಳೂರು: ಅಕ್ಟೋಬರ್ 25ರಿಂದ ಕಿರಿಯ ಪ್ರಾಥಮಿಕ ಶಾಲಾರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. 1ರಿಂದ 5ನೇ ತರಗತಿ ವರೆಗಿನ ಮಕ್ಕಳಿಗೆ ಶಾಲೆ ಆರಂಭಿಸಬಹುದೆಂದು ತಾಂತ್ರಿಕ ಸಲಹಾ ಸಮಿತಿ ಸಲಹೆ ಮಾಡಿದೆ.
ತರಗತಿಯಲ್ಲಿ ಶೇಕಡಾ 50ರಷ್ಟು ಮಕ್ಕಳಿಗೆ ಮಾತ್ರ ಅವಕಾಶ ನೀಡಬಹುದಾಗಿದೆ. ಮಕ್ಕಳಿಗೆ ಕಡ್ಡಾಯ ಹಾಜರಾತಿ ನಿಯಮ ಇಲ್ಲ, ಪೋಷಕರ ಒಪ್ಪಿಗೆ ಇದ್ದರೆ ಮಾತ್ರ ಮಕ್ಕಳಿಗೆ ತರಗತಿ ಮಾಡಬಹುದು ಎಂದು ಸೂಚಿಸಲಾಗಿದೆ.
ಅವೈಜ್ಞಾನಿಕ ನಿರ್ಧಾರ..?
ಅಕ್ಟೋಬರ್ 25ರಿಂದಲೇ 1-5ನೇ ತರಗತಿವರೆಗಿನ ಮಕ್ಕಳಿಗೆ ತರಗತಿ ಆರಂಭಿಸಲು ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಮಕ್ಕಳಿಗೆ ಕೋವಿಡ್ ಭೀತಿ ಇಲ್ಲ ಎಂಬ ಸಮಜಾಯಿಷಿಯೊಂದಿಗೆ ಸರ್ಕಾರ ಈ ತೀರ್ಮಾನ ಕೈಗೊಂಡು ವಿವಾದಾತ್ಮಕ ನಡೆ ಸನುಸರಿಸಿದೆ.
ಸೋಮವಾರ ಈ ಸಂಬಂಧ ಕೆಲವು ತೀರ್ಮಾನಗಳ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಿಕ್ಷಕರು ಮಾತ್ರ ಎರಡು ಡೋಸ್ ಕೋವಿಡ್ ಲಸಿಕೆ ಪಡೆಯಲೇಬೇಕೆಂಬ ನಿಯಮ ರೂಪಿಸಿರುವುದನ್ನು ತಿಳಿಸಿದ್ದಾರೆ. ಆದರೆ ಮಕ್ಕಳಿಗೆ ಲಸಿಕೆಯ ಅಗತ್ಯ ಇಲ್ಲವೇ? ಈ ಮಕ್ಜಳು ಎಷ್ಟು ಸುರಕ್ಷಿತರು ಎಂಬ ಬಗ್ಗೆ ಸ್ಪಷ್ಟನೆಯನ್ನು ಶಿಕ್ಷಣ ಸಚಿವರು ನೀಡಿಲ್ಲ. ಅಷ್ಟೇ ಅಲ್ಲ, ತರಗತಿಗೆ ಮಕ್ಕಳು ಹಾಜರಾಗಲೇ ಬೇಕೆಂಬ ನಿಯಮವಿಲ್ಲ ಎಂದಿರುವ ಸರ್ಕಾರ, ಅಂತಹಾ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಏನೆಂಬ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಹಾಗಾಗಿ ಮಕ್ಕಳ ಪೋಷಕರು ಗೊಂದಲಕ್ಕೀಡಾಗಿದ್ದು, ಸರ್ಕಾರದ ನಡೆ ಬಗ್ಗೆ ಆಕ್ರೋಶವನ್ನೂ ಹೊರಹಾಕಿದ್ದಾರೆ.