ದೆಹಲಿ: ಈವರೆಗೂ ಬಿಜೆಪಿ ವಿರುದ್ದ ಗುಡುಗುತ್ತಿದ್ದ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಇದೀಗ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ದ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಶನಿವಾರ ಜಗದೀಶ್ ಶೆಟ್ಟರ್ ಪರವಾಗಿ ಸೋನಿಯಾ ಗಾಂಧಿ ಪ್ರಚಾರ ಕೈಗೊಂಡಿದ್ದರು. ಈ ಕುರಿತಂತೆ ಕಟು ಟೀಕೆ ಮಾಡಿರುವ ಓವೈಸಿ, ಕಾಂಗ್ರೆಸ್ ಸಿದ್ದಾಂತ ಬಗ್ಗೆ ಮಾತನಾಡುತ್ತಿರುವ ಇವರು ಒಬ್ಬ ಆರೆಸ್ಸೆಸ್ ಪರವಾಗಿರುವ ವ್ಯಕ್ತಿಯ ಪರವಾಗಿ ಪ್ರಚಾರ ನಡೆಸಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ನಿಮ್ಮ ಜಾತ್ಯಾತೀತತೆ ಇದೇನಾ ಎಂದು ಸೋನಿಯಾ ಅವರನ್ನು ಪ್ರಶ್ನಿಸಿರುವ ಒವೈಸಿ, ನೀವು ಮೋದಿ ವಿರುದ್ದ ಹೋರಾಡುವುದು ಹೀಗೇನಾ ಎಂದು ಪ್ರಶ್ನಿಸಿದ್ದಾರೆ. ಈ ವೀಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Madam Sonia Gandhi ji, mujhe aapse ye ummid nahi thi ki aap ek @RSSorg ke aadmi ke liye campaign karne aayengi, Jagadish Shettar to RSS se hai. – Barrister @asadowaisi #Karnataka #hubli #OwaisiInKarnataka #KarnatakaAssemblyElection2023 #KarnatakaElections2023 pic.twitter.com/XxKFeHE57v
— AIMIM (@aimim_national) May 7, 2023