ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಚಿತ್ರ ಭಾರೀ ಯಶಸ್ಸಿನತ್ತ ಹೆಜ್ಜೆ ಇಟ್ಟಿದೆ. ತೆರೆ ಕಂಡ ಎರಡೇ ದಿನಗಳಲ್ಲಿ ಈ ಸಿನಿಮಾ ತನ್ನ ಒಟ್ಟು ವೆಚ್ಚದ ಅರ್ಧದಷ್ಟು ಗಳಿಕೆ ಮಾಡಿಡೇ. ಗ್ರಾಫಿಕ್ಸ್ಗೆ ಸಾಕಷ್ಟು ಮಹತ್ವ ನೀಡಿರುವ ಈ ಸಿನಿಮಾ ನಿರ್ದೇಶಕ ನಾಗ್ ಅಶ್ವಿನ್ ಅವರ ಯಶೋಗಾಥೆಗೂ ಸರ್ಟಿಫಿಕೇಟ್ ನೀಡಿದಂತಿದೆ ಎಂಬ ವರ್ಣನೆ ವ್ಯಕ್ತವಾಗಿದೆ.
‘ಕಲ್ಕಿ 2898 ಎಡಿ’ ಚಿತ್ರ ತೆರೆಕಂಡ ಮೊದಲ ದಿನ ವಿಶ್ವಾದ್ಯಂತ 191 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಎರಡನೇ ದಿನ ಸುಮಾರು 300 ಕೋಟಿ ರೂಪಾಯಿ ಸಮೀಪಿಸಿದೆ ಎನ್ನಲಾಗಿದೆ. ವಾರಾಂತ್ಯದ ದಿನಗಳಲ್ಲಿ ಮತ್ತಷ್ಟು ಗಳಿಕೆಯಾ ನಿರೀಕ್ಷೆಯಲ್ಲಿರುವ ಚಿತ್ರ ತಂಡ, ಒಂದು ವಾರದಲ್ಲೇ ಹೂಡಿಕೆ ಹಣವನ್ನು ಮರಳಿ ಪಡೆಯುವ ಲೆಕ್ಕಾಚಾರದಲ್ಲಿದೆ.