ದೆಹಲಿ: ಕೊರೋನಾ ವೈರಾಣು ದೇಶಾದ್ಯಂತ ಮರಣ ಮೃದಂಗ ಭಾರಿಸುತ್ತಿದೆ. ಆದರೆ ಸೋಂಕಿನ ವೇಗದ ಪ್ರಮಾಣ ತಗ್ಗಿದೆ. ವಿವಿಧ ರಾಜ್ಯಗಳಲ್ಲಿ ಮಂಗಳವಾರ ಸಿಕ್ಕಿದ ಅಂಕಿ ಅಂಶಗಳ ಪ್ರಕಾರ ಸೋಮವಾರ ಒಂದೇ ದಿನ 42,640 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಸೋಂಕಿಗೊಳಗಾದವರ ಸಂಖ್ಯೆ 2,99,77,861ಕ್ಕೆ ಏರಿಕೆಯಾಗಿದೆ.
ಇದೇ ವೇಳೆ ಒಂದೇ ದಿನದಲ್ಲಿ 1,167 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.







































































