ಬೆಂಗಳೂರು: ಆಂದ್ರಪ್ರದೇಶದ ಚಿತ್ತೂರಿನಲ್ಲಿ ಅಪಘಾತಕ್ಕೀಡಾಗಿದ್ದ ಬೆಂಗಳೂರಿನ ಶಿವಾಜಿನಗರ ಪೊಲಿಸ್ ಠಾಣೆಯ ಪೊಲಿಸ್ ಪೇದೆ, ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ತಿಕ್ಕಲಕಿ ಗ್ರಾಮದ ಹುತಾತ್ಮ ಪೊಲಿಸ್ ಪೇದೆ ಅನಿಲ್ ಮುಲಿಕ್ ಅವರ ತಂದೆ ದಾಜಿಬಾ, ತಾಯಿ ಶಾಂತಾಬಾಯಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹುತಾತ್ಮರ ಕುಟುಂಬಕ್ಕೆ ಸಾಂತ್ವನ ಹೇಳಿ, ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು.
© 2020 Udaya News – Powered by RajasDigital.







































































