ನವದೆಹಲಿ: ಭಾರತೀಯ ಕುಸ್ತಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಆಯ್ಜೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವಾರಣಾಸಿ ಕುಸ್ತಿ ಸಂಸ್ಥೆಯ ಅಧ್ಯಕ್ಷರಾಗಿರುವ ಸಂಜಯ್ ಸಿಂಗ್ ಅವರು ಜಯಗಳಿಸಿದ್ದಾರೆ. ಸಂಜಯ ಸಿಂಗ್ ಅವರಿಗೆ 40 ಮತಗಳು ಸಿಕ್ಕಿದರೆ ಎದುರಾಳಿ ಅಭ್ಯರ್ಥಿ ಅನಿತಾ ಶೆಯೊರಾನ್ ಅವರಿಗೆ 7 ಸಿಕ್ಕಿವೆ.





































































