ಬಾವಿಗೆ ಬಿದ್ದ ಬಾಲಕ.. ರಕ್ಷಿಸಲು ಹೋದ 20ಕ್ಕೂ ಹೆಚ್ಚು ಮಂದಿ ಸಮಾಧಿ.. ಕ್ಷಿಪ್ರ ಕಾರ್ಯಾಚರಣೆಯಲ್ಲಿ 19 ಮಂದಿ ಪಾರು.
ವಿದಿಶಾ: ಬೆಳ್ಳಂಬೆಳಿಗ್ಗೆಯೇ ಘೋರ ಘಟನೆಯೊಂದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಬಾಲಕನೊಬ್ಬನನ್ನು ರಕ್ಷಿಸಲು ಹೋದ ಸುಮಾರು 30 ಜನರು ಸಮಾಧಿಯಾದ ಘೋರ ಘಟನೆ ವಿಧಿಶಾ ಬಳಿ ಸಂಭವಿಸಿದೆ. ಈ ಪೈಕಿ 19 ಮಂದಿಯನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ.
ಮಧ್ಯ ಪ್ರದೇಶದ ವಿದಿಶಾ ಸನೀಪದ ಹಳ್ಳಿಯಲ್ಲಿ ಬಾಲಕನೊಬ್ಬ ಬಾವಿಗೆ ಬಿದ್ದಿದ್ದಾನೆ. ಈ ಸಂದರ್ಭದಲ್ಲಿ ಒಂದಷ್ಟು ಮಂದಿ ಮಗುವಿನ ರಕ್ಷಣೆಯಲ್ಲಿ ತೊಡಗಿದ್ದರೆ, ಭಾರೀ ಸಂಖ್ಯೆಯಲ್ಲಿ ಜನರು ಬಾವಿಯ ಪಕ್ಕದಲ್ಲಿ ನಿಂತು ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಜನರ ಭಾರ ಹೆಚ್ಚಾಗಿ ಒಂದು ಭಾಗದಲ್ಲಿ ಭೂಮಿ ಕುಸಿದಿದೆ.
ಈ ಘೋರ ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಮಣ್ಣಿನಡಿ ಸಿಲುಕಿ ಸಮಾಧಿಯಾದರು. ಕೂಡಲೇ ಅಗ್ನಿಶಾಮಕ ದಳ ಹಾಗೂ ವಿಪತ್ತು ನಿರ್ವಹಣಾ ತಂಡ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ಕ್ಷಿಪ್ರ ರಕ್ಷಣಾ ಕಾರ್ಯಾಚರಣೆಯಲ್ಲಿ 19 ಮಂದಿಯನ್ನು ಪಾರು ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ಸಂದರ್ಭದಲ್ಲಿ ಮೂವರು ಮೃತದೇಹವಾಗಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.