ಬೆಂಗಳೂರು: ಕೊರೋನಾ ಪಾಸಿಟಿವ್ ಕೇಸ್‌ಗಳ ಪ್ರಮಾಣ ಕಡಿಮೆಯಾಗಿರುವುದರಿಂದ ಲಾಕ್‌ಡೌನ್ ನಿಯಮ ಮತ್ತಷ್ಟು ಸಡಿಲಿಕೆಯಾಗಿದೆ. ಇಂದು ಸಂಜೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಗತ್ಯ ಸೇವೆಗಳ ಹೊರತಾಗಿಯೂ ಇನ್ನಷ್ಟು ಕ್ಷೇತ್ರಗಳಿಗೆ ಅವಕಾಶ ನೀಡುವ ನಿರ್ಧಾರವನ್ನು ಪ್ರಕಟಿಸಿದರು.
ಸೋಮವಾರದ ನಂತರ ರಾಜ್ಯದಲ್ಲಿ ಏನಿರುತ್ತೆ? ಏನಿರಲ್ಲ..? ಇಲ್ಲಿದೆ ಮಾಹಿತಿ..
- ರಾಜ್ಯಾದ್ಯಂತ ಇರುವ ವಾರಾಂತ್ಯದ ಕರ್ಫ್ಯೂ ಜಾರಿ ಇರಲ್ಲ.
- ನೈಟ್ ಕರ್ಫ್ಯೂ ಸಮಯ ರಾತ್ರಿ 9ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಸೀಮಿತ.
- ದೇವಾಲಯ, ಪ್ರಾರ್ಥನಾ ಮಂದಿರಗಳನ್ನು ತೆರೆಯಲು ಅವಕಾಶವಿದೆ.
- ದೇವಾಲಯ, ಪ್ರಾರ್ಥನಾ ಮಂದಿರಗಳಲ್ಲಿ ಪೂಜರ, ಪ್ರಸಾದ, ಅನ್ನ ಸಂತರ್ಪಣೆಗೆ ಅವಕಾಶ ಇಲ್ಲ
- ಪಬ್ ಆರಂಭಕ್ಕೆ ನಿರ್ಬಂಧ ಮುಂದುವರಿಕೆ.
- ಶಾಲಾ ಕಾಲೇಜುಗಳಿಗೆ ಇರುವ ನಿಯಮ ಮುಂದುವರಿಕೆ.
- ಸಿನಿಮಾ ಮಂದಿರ ಮತ್ತಷ್ಟು ದಿನ ಬಂದ್.
- ಬಿಎಂಟಿಸಿ, ಕೆಸ್ಸಾರ್ಟಿಸಿ ಬಸ್‌ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಯಾಣಿಕರ ಭರ್ತಿಗೆ ಅವಕಾಶ.
- ಮೆಟ್ರೋ ರೈಲಿನಲ್ಲಿ ಶೇಕಡಾ ನೂರು ಸೀಟು ಭರ್ತಿಗೆ ಅವಕಾಶ.
- ಅಂತ್ಯ ಸಂಸ್ಕಾರದಲ್ಲಿ 20 ಮಂದಿ ಪಾಲ್ಗೊಳ್ಳಲು ಅವಕಾಶ.
- ಕೌಟುಂಬಿಕ ಸಭೆ ಸಮಾರಂಭಗಳಲ್ಲಿ 100 ಮಂದಿ ಭಾಗವಹಿಸಲು ಅವಕಾಶ.
- ಧಾರ್ಮಿಕ, ರಾಜಕೀಯ ಸಮಾರಂಭಗಳು ಹಾಗೂ ಪ್ರತಿಭಟನೆಗಳಿಗೆ ನಿರ್ಬಂಧ ಮುಂದುವರಿಕೆ.