(ವರದಿ : ನವೀನ್)
ಬೆಂಗಳೂರು: ಸಿಲಿಕಾನ್ ಸಿಟಿಗೆ ಜೀವನಾಡಿಯಾಗಿದ್ದ ಒಂದು ಕಾಲದ ಜೀವ ನದಿಯಾಗಿದ್ದ ಅರ್ಕಾವತಿ, ಕುಮದ್ವತಿ ನದಿಗಳು ತಿಪ್ಪಗೊಂಡನಹಳ್ಳಿ, ಮಂಚನಬೆಲೆ ಜಲಾಶಯಳಲ್ಲಿ ಶೇಖರಣೆಗಾಗಿ ಬೆಂಗಳೂರಿನ ಬಹು ಭಾಗಗಳಿಗೆ ಕುಡಿಯುವ ನೀರಿಗೆ ಆಸರೆಯಾಗಿತ್ತು. ಕಾಲ ಕ್ರಮೇಣ ಆಧುನಿಕತೆಯ ಭರಾಟೆಯಲ್ಲಿ ನದಿ ಮೂಲಗಳು, ಜೀವಸೆಲೆಗಳು ಮುಚ್ಚಿ ಹೋದ ಹಿನ್ನೆಲೆ ನದಿಗಳು ಬತ್ತಿ ಹೋಗಿ ನೀರಿನ ಸೆಲೆಗಳು ಬರಿದಾಗುತ್ತಿವೆ.
ಜಲ್ಲಿ ಕ್ರಶರ್ ಗಳಿಂದಾಗಿ ಜಲಾಶಗಳ ಒಳ ಹರಿವು ಮತ್ತು ಕಲುಶಿತ ನೀರು ಜಲಾಶಯದ ಒಡಲು ಸೇರಿ ಸೇರುತಿದ್ದು ಮುಂದೆ ಹೀಗೆ ಸಾಗಿದಲ್ಲಿ ಎರಡೂ ಅವಳ ಜಲಾಶಯಗಳು ಒಳ ಹರಿವಿಲ್ಲದೆ ಮಂಚನಬೆಲೆ ಜಲಾಶಯ ಕೂಡ, ತಿಪ್ಪಗೊಂಡಬಹಳ್ಳಿ ಜಲಾಶಯದ ಹಾಗೆ ಅನುಪಯುಕ್ತ ಆಗುವುದರಲ್ಲಿ ಸಂಶವಿಲ್ಲ.
ಅದಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ಸಮಾಜ ಪರಿವರ್ತನಾ ಸಮಿತಿ ಅರ್ಜಿ ಸತತ 4 ವರ್ಷಗಳ ಬಳಿಕ ತೀರ್ಪು ಪ್ರಕಟಿಸಿದ್ದು, ಅಕ್ರಮ ಕ್ರಶರ್, ಗಣಿಗಾರಿಕೆಗೆ ಬ್ರೇಕ್ ಹಾಕಿದೆ, ಪ್ರತಿ ತಿಂಗಳು ಸರ್ಕಾರ ಅಥವಾ ಸಂಭಂದ ಪಟ್ಟ ಇಲಾಖೆ ಸರ್ವೆ ನಡೆಸಿ ವರದಿ ಸಲ್ಲಿಸಲು ಸೂಚನೆ ನೀಡಿದ್ದು, ಅಕ್ರಮ ಕಂಡು ಬಂದಲ್ಲಿ ಕೂಡಲೆ ಕ್ರಮ ಕೈಗೊಳ್ಳಲು ಸೂಚನೆ ನಿಡಿದ್ದು, ಅದಕ್ಕಾಗಿ ಒಂದು ನಿಗಮ ಮಂಡಳಿ ಸ್ಥಾಪನೆಗೆ ಸೂಚನೆ ನೀಡಿದೆ. ಅರ್ಜಿದಾರರಿಗೂ ಮುಖ್ತ ಅವಕಾಶ ನೀಡಿರುವ ನ್ಯಾಯಾದೀಶರು ಅಕ್ರಮ ಕಂಡು ಬಂದಲ್ಲಿ ಕೂಡಲೆ ಕೋರ್ಟ್ ಗಮನಕ್ಕೆ ತರಬಹುದಾಗಿ ಅವಕಾಶ ಕಲ್ಪಿಸಿದೆ.
ಅಂತೆಯೇ ಕರ್ನಾಟಕ ಹೈ ಕೋರ್ಟ್ ನೀಡಿರುವ ಆದೇಶ ಸಮಾಧಾನಕರವಾಗಿದ್ದು ಅಕ್ರಮಕ್ಕೆ ಕಡಿವಾಣ ಹಾಕಿದೆ ಆದರೆ ಉಳಿಕೆ ಪರವಾನಿಗೆ ಪಡೆದಿರುವ ಕ್ರಶರ್‍ಗಳು ಒಂದೇ ಪರವಾನಿಗೆಯಡಿ 5-6ಕ್ಕೂ ಹೆಚ್ಚು ಘಟಕ ನಡೆಸುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಹೆಚ್ಚಾಗಿದೆ. ತಿಪ್ಪಗೊಂಡನಹಳ್ಳಿ ಮತ್ತು ಮಂಚನಬೆಲೆ ಜಲಾನಯನ ಪ್ರದೇಶ ಕ್ಯಾಚ್ಮೇಟ್ ಏರಿಯಾದಡಿ ಬರುವುದರಿಂದ ಸಂಪೂರ್ಣ ಗಣಿಗಾರಿಕೆ ಸ್ಥಗಿತ ಗೊಳಿಸಿ ಅರ್ಕಾವತಿ ಜಾನಯನ ಪ್ರದೇಶವನ್ನ ಕಾಪಾಡುವ ನಿಟ್ಟಿನಲ್ಲಿ ಅರ್ಜಿದಾರರು ಸುಪ್ರೀ ಮೊರೆ ಹೋಗಲು ನಿರ್ಧರಿಸಿದ್ದು ಹೈ ಕೋರ್ಟ್ ವರದಿ ಮತ್ತು ಆದೇಶವನ್ನ ಮರು ಪರಿಶೀಲಿಸಿ ಸಂಪೂರ್ಣ ಗಣಿಗಾರಿಕೆ ನಿಲ್ಲಿಸಿ ಇಸ್ರೋ ಸೇರಿದಂತೆ ಅವಳಿ ಜಲಾಶಯಗಳ ರಕ್ಷಣೆ ಮಾಡುವಂತೆ ಮಾಡಿದ್ದಾರೆ.