ಮಂಗಳೂರು: ಬಂದರು ನಗರಿ ಮಂಗಳೂರು ಒಂದಿಲ್ಲೊಂದು ಸುದ್ದಿಯ ಕೇಂದ್ರಬಿಂದುವಾಗುತ್ತಲೇ ಇದೆ. ಅದರಲ್ಲೂ ಮೂಲಸೌಕರ್ಯ ಕಾಮಗಾರಿ ವಿಚಾರದಲ್ಲಂತೂ ಅವಾಂತರದ ಸುದ್ದಿಗಳೇ ಹೆಚ್ಚು.
ದಶಕದಿಂದಲೂ ಸುದ್ದಿಯ ಕೇಂದ್ರಬಿಂದುವಾಗುತ್ತಿರುವ ಮಂಗಳೂರಿನ ಪಂಪ್‌ವೆಲ್ ಸೇತುವೆ ಇದಿಗ ಮತ್ತೆ ಅವಾಂತರದ ಪರಿಸ್ಥಿತಿಯಿಂದಾಗಿ ಮಂಗಳೂರು ಜನರ ಹಿಡಿಶಾಪಕ್ಕೆ ಗುರಿಯಾಗಿದೆ. ಮೇಲ್ಸೇತುವೆ ನಿರ್ಮಾಣಕ್ಕೆ ಬರೋಬ್ಬರಿ 10 ವರ್ಷಗಳೇ ಬೇಕಾಯಿತು. ಗುತ್ರಿಗೆದಾರರಿಂದಾದ ಕಾಮಗಾರಿ ವಿಳಂಬದಿಂದಾಗಿ ಮಂಗಳೂರು ಸಂಸದರು ಹಾಗೂ ಬಿಜೆಪಿ ಸರ್ಕಾರವು ಆಕ್ರೋಶದ ಮಾತುಗಳನ್ನು ಕೇಳುವಂತಾಯಿತು. ಅಂತೂ ಇಂತೂ ನಳಿನ್ ಕುಮಾರ್ ಅವರ ಸುದೀರ್ಘ ಪರಿಶ್ರಮದಿಂದಾಗಿ ಮೇಲುಸೇತುವೆಯೇನೋ ವಾಹನ ಸಂಚಾರಕ್ಕೆ ಮುಕ್ತವಾಯಿತಾದರೂ, ಕಾಮಗಾರಿ ಮುಗಿದ ನಂತರ ಅಧ್ವಾನ ಸೃಷ್ಟಿಯಾಗಿದೆ. ಸರ್ವೀಸ್ ರೋಡ್‌ನಲ್ಲಿ ವಾಹನ ಸಂಚಾರ ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಇದೀಗ ಮುಂಗಾರು ಪೂರ್ವದ ಮಳೆ ಸಂದರ್ಭದಲ್ಲ ಈ ಹೆದ್ದಾರಿಯ ಸರ್ವೀಸ್ ರಸ್ತೆ ಹೇಗಿದೆ ನೋಡಿ. ರಸ್ತೆಯಲ್ಲಿ ಸಂಚರಿಸಬೇಕಾದ ವಾಹನಗಳು ನೀರಲ್ಲಿ ತೇಳಿಕೊಂಡು ಹೋಗುವ ಸನ್ನಿವೇಶ ಕಂಡುಬರುತ್ತಿದೆ.
ಈ ಅವಾಂತದದಿಂದಾಗಿ ಸರ್ವೀಸ್ ರಸ್ತೆ ಬಳಸುವ ಮಂಗಳೂರು ಮಂದಿ ಪರದಾಡುವಂತಾಗಿದೆ.
ಈ ಪರಿಸ್ಥಿತಿಯಿಂದ ನೊಂದ ಹಲವರು ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರೆ, ಈ ವರೆಗೂ ಸಹನೆಯಿಂದಲೇ ಇದ್ದ ಮಂದಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ.
ಈ ನಡುವೆ, ಈ ಅಧ್ವಾನದ ಸನ್ನಿವೇಶದ ವೀಡಿಯೋಗಳನ್ನು ವೈರಲ್ ಮಾಡುತ್ತಿರುವ ಕರಾವಳಿಯ ಯುವಕರು ವ್ಯಂಗ್ಯದ ಮಾತುಗಳಿಂದ ಸಂಸದರ ಲೋಪಗಳನ್ನು ಬೊಟ್ಟು ಮಾಡುತ್ತಿದ್ದಾರೆ. ಹಲವರು ಥ್ಯಾಂಕ್ಯೂ ನಳಿನನಣ್ಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಈ ಸ್ಥಿತಿ ಬಗ್ಗೆ ವ್ಯಂಗ್ಯವಾಡಿದ್ದಾರೆ. ಪ್ರಸ್ತುತ ದಿನಗಳಲ್ಲಿ ಅತೀ ಹೆಚ್ಚು ಟ್ರೋಲ್ ಆಗುತ್ತಿರುವ ಸಂಗತಿಯಾಗಿ ಇದು ಗಮನಸೆಳೆದಿದೆ.