ಮಂಗಳೂರು: ಸಂಕಟ ಕಾಲದಲ್ಲಿ ಆಪತ್ಬಾಂಧವನಂತೆ ಗುರುತಾಗುತ್ತಿರುವ ಕರಾವಳಿಯ ಶಾಸಕ ರಾಜೇಶ್ ನಾಯ್ಕ್ ಅವರು ಇದೀಗ ಮತ್ತೆ ನಾಡಿನ ಗಮನಸೆಳೆದಿದ್ದಾರೆ. ಕೊರೋನಾ ಸೋಂಕಿನಿಂದ ಸಂತ್ರಸ್ತರಾದ ಕುಟುಂಬಕ್ಕೆ ಆಸರೆಯಾಗುವ ಅವರ ನಿರ್ಧಾರ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಕೊರೊನಾ ಸೊಂಕಿನಿಂದ ಪೋಷಕರು ಮೃತಪಟ್ಟ ಸರ್ವ ಧರ್ಮದ ಬಡ ಕುಟುಂಬ ಗಳಿದ್ದರೆ ಗುರುತಿಸಿ ಅಂತಹ ಮನೆಯಲ್ಲಿರುವ ಮಕ್ಕಳ ವಿದ್ಯಾಭ್ಯಾಸ ಹಾಗೂ ಪೋಷಣೆಯ ಜವಬ್ದಾರಿಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ವಹಿಸಿಕೊಂಡಿದ್ದಾರೆ. ಅವತಲರ ಸಾರಥ್ಯದ ಈ ಕೆಲಸಕ್ಕೆ ಬಿಜೆಪಿ ಕಾರ್ಯಕರ್ತರೀ ಬೆಂಗಾವಲಾಗಿ ನಿಂತಿದ್ದಾರೆ.
ಸರ್ವಧರ್ಮದ ಈ ಕೆಲಸವನ್ನು ಬಿಜೆಪಿ ಪಕ್ಷದ ನಿಧಿ ಯೋಜನೆಯ ಮೂಲಕ ವಹಿಸಿಕೊಳ್ಳಲು ನಿಶ್ಚಯ ಮಾಡಿದ್ದೇವೆ ಎಂದು ಬಂಟ್ವಾಳ ಬಿಜೆಪಿ ಕ್ಷೇತ್ರ ಅಧ್ಯಕ್ಷ ದೇವಪ್ಪ ಪೂಜಾರಿ ತಿಳಿಸಿದ್ದಾರೆ..
ನರೇಂದ್ರ ಮೋದಿಯವರ ಆಡಳಿತದ ಏಳನೇ ವರ್ಷದ ಸಂಭ್ರಾಮಾಚರಣೆಯನ್ನು ಸೇವೆಯ ಮೂಲಕ ಆಚರಿಸಲು ನಿರ್ಧರಿಸಿದ್ದು ಈ ನಿಧಿಗೆ ಶಾಸಕರು ಹತ್ತು ಲಕ್ಷ ಘೋಷಣೆ ಮಾಡಿದ್ದು, ಬೆಜೆಪಿ ಪ್ರಮುಖರಿಂದ ಧನಸಂಗ್ರಾಹ ಮಾಡಿ ಒಟ್ಟು 25 ಲಕ್ಷ ರೂಗಳನ್ನು ನಿಧಿಯಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷ ರ ಹಾಗೂ ಪ್ರಧಾನ ಕಾರ್ಯದರ್ಶಿಯವರ ಖಾತೆಯಲ್ಲಿ ಜಮೆ ಮಾಡಿ ಬಂಟ್ವಾಳ ಬಿಜೆಪಿ ಕ್ಷೇಮ ನಿಧಿ ಸ್ಥಾಪಿಸಲಾಗುವುದು ಎಂದವರು ಯೋಜನೆಯ ಸ್ವರೂಪವನ್ನು ವಿವರಿಸಿದರು.
ಬಂಟ್ವಾಳ ಬಿಜೆಪಿ ಸೇವಾ ನಿಧಿಯ ಮೂಲಕ ಮುಂದಿನ ಸೇವೆ ಕಾರ್ಯಕ್ರಮಗಳು ಆರಂಭವಾಗಲಿದೆ ಎಂದ ಅವರಿ ಮೇ.30ರಂದು ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಶಾಸಕರ ಉಪಸ್ಥಿತಿಯಲ್ಲಿ ನಿಧಿ ಸಂಗ್ರಹಣೆ ಗೆ ಚಾಲನೆ ನೀಡಲಾಗುತ್ತದೆ ಎಂದು ವಿವರಿಸಿದರು.
ಇದು ಕೊರೊನಾ ಕ್ಕೆ ಸೀಮತವಾಗದೆ ಮುಂದಿನ ದಿನಗಳಲ್ಲಿ ಬಡ ಕುಟುಂಬಕ್ಕೆ ಸಹಾಯವಾಗುವ ನಿಟ್ಟಿನಲ್ಲಿ ಈ ಯೋಜನೆಗೆ ಯೋಚನೆ ಮಾಡಿ ಕಾರ್ಯರೂಪಕ್ಕೆ ತರಲು ಯತ್ನಿಸಿದ್ದೇವೆ ಎಂದು ಅವರು ತಿಳಿಸಿದರು.
ಯೋಜನೆಯ ಹೈಲೈಟ್ಸ್ ಹೀಗಿದೆ:
- ಮೇ.30 ರಂದು 59 ಗ್ರಾಮದ ಬೂತ್‌ಗಳಲ್ಲಿ ಸೇವಾ ಚಟುವಟಿಕೆಗಳಿಗೆ ಚಾಲನೆ ನೀಡಲಾಗುತ್ತದೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಅನಂತಾಡಿ, ನೆಟ್ಲಮೂಡ್ನೂರು ಎರಡು ಗ್ರಾಮದಲ್ಲಿ ನಡೆಯುವ ಸೇವಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.
- ಮೇ.30 ರಿಂದ ಮೂರು ದಿನಗಳ ಕಾಲ ಸೇವೆ ಕಾರ್ಯಕ್ರಮ ನಡೆಯಲಿದೆ.
- ಎಲ್ಲಾ ಬೂತ್ ಗಳಲ್ಲಿ 22 ಕಾರ್ಯಕ್ರಮ ಗಳನ್ನು ಮಾಡಲು ನಿಶ್ಚಯಿಸಲಾಗಿದೆ.
- ಕೊರೊನಾ ವಿರುದ್ದ ಹೊರಾಡಿದ ಅಧಿಕಾರಿಗಳು, ಆಶಾಕಾರ್ಯಕರ್ತೆಯರ ಗುರುತಿಸುವಿಕೆ, ಕೊರೊನಾ ಸೊಂಕಿತರ ಮನೆ ಬೇಟಿ ಜೊತೆಗೆ ಅವರಿಗೆ ಸೌಲಭ್ಯವಿತರಣೆ ಮಾಡುವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
- ಸ್ವಚ್ಚತೆ, ಬಡಕುಟುಂಬದ ಮನೆ ದುರಸ್ತಿಗೆ ಸಹಕಾರ, ರಸ್ತೆ ದುರಸ್ತಿ ಹೀಗೆ ಸಾರ್ವಜನಿಕ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ನೀಡುವ ಕಾರ್ಯಕ್ರಮಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತದೆ.
- ಪಕ್ಷದ ಜವಬ್ದಾರಿ ಯಿರುವ ಪ್ರತಿಯೊಬ್ಬರೂ ಗ್ರಾಮದಲ್ಲಿ ನಡೆಯುವ ಸೇವಾ ಕಾರ್ಯ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಸೂಚಿಸಲಾಗಿದೆ.
- ಕೊರೊನಾ ಮುಕ್ತ, ಗ್ರಾಮ ಹಾಗೂ ಪ್ರತಿಯೊಬ್ಬರಿಗೂ ಲಸಿಕೆ ಪಡೆಯುವ ಸಲುವಾಗಿ ಬಿಜೆಪಿಯಿಂದ ಸಂಘಟನಾತ್ಮಕ ರೀತಿಯಲ್ಲಿ ಕೆಲಸ.
- ಬಂಟ್ವಾಳವನ್ನು ಮಾದರಿ ಕ್ಷೇತ್ರವಾಗಿ ರೂಪಿಸಲು ವಿಶೇಷ ಪ್ರಯತ್ನಗಳನ್ನು ಮಾಡುತ್ತಿರುವ ಶಾಸಕರಿಗೆ ಕ್ಷೇತ್ರದ ಜನರ ಸಹಕಾರ , ಬೆಂಬಲ.
- ಕೊರೊನಾ ನಿಯಂತ್ರಣಕ್ಕೆ ಶಾಸಕರು 24ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡುತ್ತಿದ್ದು ಜೊತೆಯಲ್ಲಿ ಅವರಿಗೆ ಸಾಥ್ ನೀಡುವ ಶಾಸಕರ ವಾರ್ ರೂಮ್, ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರಿಂದ ಕೊರೊನಾ ನಿಯಂತ್ರಣಕ್ಕೆ ಹಗಲಿರುಳು ಕೆಲಸ.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಡೊಂಬಯ್ಯ ಅರಳ, ರವೀಶ್ ಶೆಟ್ಟ ಕರ್ಕಳ, ಮೋನಪ್ಪ ದೇವಸ್ಯ, ಸುದರ್ಶನ ಬಜ, ಪ್ರದೀಪ್ ಅಜ್ಜಿಬೆಟ್ಟು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.