ದೇಶ ವಿರೋಧಿ ಘೋಷಣೆ ಕೂಗುವವರಿಗೆ ಕಠಿಣ ಕ್ರಮದ ಸಂದೇಶ ರವಾನೆಯಾಗುತ್ತಿದ್ದರೂ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಇದೀಗ ದೇಶ ವಿರೋಧಿ ಘೋಷಣೆಗಳನ್ನು ಬರೆದಿದ್ದಲ್ಲದೆ ಪಾಕ್ ಪರ ಫೋಸ್ ನೀಡಿದ ವ್ಯಕ್ತಿಯನ್ನು ಉಜ್ಜಯಿನಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸಹೀಲ್ ಎಂಬ ವ್ಯಕ್ತಿ ಬಂಧಿತರಾಗಿದ್ದು, ದೇಶ ವಿರೋಧಿ ಘೋಷಣೆಯನ್ನು ಸಾಮಾಜಿಕ ಜಾಲತಣಗಳಲ್ಲಿ ಫೋಸ್ಟ್ ಹಾಕಿದ್ದಾರೆ. ಹಾಗೂ ಪಾಕ್ ಧ್ವಜವಿರುವ ಟೀಶರ್ಟ್ ಧರಿಸಿದ ಫೊಟೋವನ್ನೂ ಹಾಕಿದ್ದರು ಎಂದು ಹಿಂದೂ ಸಂಘಟನೆಗಳು ದೂರಿವೆ.
ಈ ಬಗ್ಗೆ ಭಜರಂಗ ದಳ ಕಾರ್ಯಕರ್ತರು ನೀಡಿದ ದೂರನ್ನಾಧರಿಸಿ ಪೊಲೀಸರು ಭಾನುವಾರ ಸಂಜೆ ಸಾಹೀಲ್ ಎಂಬ ವ್ಯಕ್ತಿಯನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಿದ್ದಾರೆ.