‘ಕಾಂಚನಾ-3’ ಚಿತ್ರದ ನಟಿ ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ರಷ್ಯಾ ಮೂಲದ ರೂಪದರ್ಶಿಯೂ ಆಗಿರುವ ಚಿತ್ರ ನಟಿ ಅಲೆಕ್ಸಾಂಡ್ರಾ ಜಾವು ಅವರ ಮೃತ ದೇಹ ಗೋವಾದ ಪಣಜಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಟಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಕಾಲಿವುಡ್‍ನ ಸೂಪರ್ ಹಿಟ್ ಪಡೆದಿದ್ದ ‘ಕಾಂಚನಾ-3’ ಸಿನಿಮಾದಲ್ಲಿ ಈ ನಟಿ ಅಭಿನಯಿಸಿದ್ದರು. ಬಾಡಿಗೆ ಮನೆಯಲ್ಲಿ ವಾಸವಿದ್ದ ಅಲೆಕ್ಸಾಂಡ್ರಾ ಮನೆಗೆ ಕೆಲವು ದಿನಗಳ ಹಿಂದೆ ವ್ಯಕ್ತಿಯೊಬ್ಬರು ಭೇಟಿ ನೀಡಿದ್ದರು. ಅನಂತರ ಆಕೆ ಖಿನ್ನತೆಯಲ್ಲಿದ್ದರು. ಮನೆಯಿಂದ ಹೊರಗೆ ಬರುತ್ತಿರಲಿಲ್ಲ ಎಂದು ನೆರೆಹೊರೆಯವರು ಹೇಳಿದ್ದಾರೆ.
ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.