ಒಂದಿಲ್ಲೊಂದು ಕೌರ್ಯದಿಂದ ನಿತ್ಯವೂ ಸುದ್ದಿಯಾಗುತ್ತಿರುವ ತಾಲಿಬಾನಿಗಳ ರಕ್ಕಸತನದ ಪರಮಾವಧಿ ಇದೀಗ ಎಲ್ಲೆ ಮೀರಿದೆ. ಜನರನ್ನು ಮನಬಂದಂತೆ ಥಳಿಸುವುದು, ಕಗ್ಗೊಲೆ ಮಾಡುವುದು ಇತ್ಯಾದಿ ಹಿಂಸಾಕಾಂಡಗಳಿಗೆ ಆಫ್ಘಾನಿಸ್ತಾನ ಸಾಕ್ಷಿಯಾಗುತ್ತಿದೆ.
ಪ್ರಸ್ತುತ ಆಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲೀಬಾನ್ ಉಗ್ರರು ಮಹಿಳೆಯರ ಸ್ವಾತಂತ್ರ್ಯ ಕಿತ್ತುಕೊಂಡಿದ್ದಾರೆ. ಅಷ್ಟೇ ಅಲ್ಲ ಕಾಮತೃಷೆಗಾಗಿ ಮಹಿಳೆಯರನ್ನು ಬಳಸಿಕೊಳ್ಳುವ ಪೈಶಾಚಿಕತೆಯ ವೈಖರಿ ಕೂಡಾ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತಿದೆ.
ತಮ್ಮ ಧರ್ಮವೇ ಶ್ರೇಷ್ಠ ಎಂದು ಹೇಳಿಕೊಳ್ಳುತ್ತಿರುವ ತಾಲಿಬಾನಿಗಳು ತಮ್ಮ ಮಾತೃ ಸ್ಥಾನದಲ್ಲಿರುವ ಮಹಿಳೆಯರನ್ನು ಹೀನಾಯವಾಗಿ ನೋಡಿಕೊಳ್ಳುತ್ತಿದ್ದಾರೆ. ಮಹಿಳೆಯರನ್ನು ಕೊಂದು ಶವಗಳ ಜೊತೆ ಸಂಭೋಗ ಮಾಡುವ ನೀಚ ಕೃತ್ಯಗಳನ್ನೂ ತಾಲಿಬಾನಿಗಳು ನಡೆಸಿದ್ದಾರಂತೆ.
ಉಗ್ರರ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಆಫ್ಘಾನಿಸ್ತಾನದಿಂದ ಭಾರತಕ್ಕೆ ಓಡಿ ಬಂದಿರುವ ಆಪ್ಘಾನ್ ಮಹಿಳೆಯೊಬ್ಬರು ತಾಲಿಬಾನಿಗಳ ಈ ನೀಚ ಕೃತ್ಯದ ಬಗ್ಗೆ ಹೇಳಿಕೊಂಡಿದ್ದಾರೆ.
ಮಾಧ್ಯಮ ಸಂವಾದವೊಂದರಲ್ಲಿ ಆಫ್ಘಾನ್‌ನಲ್ಲಿನ ನೋವಿನ ಸಂಗತಿಗಳನ್ನು ಹೇಳಿಕೊಂಡ ಮುಸ್ಕಾನ್ ಎಂಬ ಮಹಿಳೆ, ತಾಲಿಬಾನಿಗಳು ಮಹಿಳೆಯರನ್ನು ಅಪಹರಿಸಿ ಕೊಲೆ ಮಾಡಿ ಶವಗಳೊಂದಿಗೆ ಲೈಂಗಿಕ ಕ್ರಿಯೆ ಮಾಡುತ್ತಿದ್ದರೆಂದು ಹೇಳಿದ್ದಾರೆ. ಹೆಣ್ಣುಮಕ್ಕಳಿಗಾಗಿ ಪ್ರತೀ ಮನೆಗಳನ್ನು ಹುಡುಕಾಡುತ್ತಿದ್ದರಂತೆ. ತಾಲಿಬಾನಿಗಳಿಗೆ ಬಗ್ಗದಿದ್ದರೆ ಹಿಂಸಿಸುತ್ತಿದ್ದರಂತೆ.
ಈ ಮಹಿಳೆ ಆಫ್ಘಾನಿಸ್ಥಾನದ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ತಾಲಿಬಾನಿಗಳ ಬೆದರಿಕೆಯಿಂದ ಬೇಸತ್ತು ಭಾರತಕ್ಕೆ ಓಡಿಬಂದು ದೆಹಲಿಯಲ್ಲಿ ವಾಸವಿದ್ದಾರೆ.