ಬೆಂಗಳೂರು: ಬಿಜೆಪಿ ಕಾಂಗ್ರೆಸ್ ದಿಗ್ಗಜ ನಾಯಕರಾದ ಸಿ.ಟಿ.ರವಿ ಮತ್ತು ಸಿದ್ದರಾಮಯ್ಯ ನಡಿವಿನ ವಾಗ್ಯುದ್ದ ಇದೀಗ ರೋಚಕತೆಯ ಸ್ವರೂಪ ಪಡೆದಿದೆ. ರಾಜಕೀಯ ವಿಚಾರಗಳಿಗೆ ಅಷ್ಟೇನೂ ಸಿಟ್ಟಾಗದ ಸಿ.ಟಿ.ರವಿ ಅವರು ಆರೆಸ್ಸೆಸ್ ಹಾಗೂ ಹಿಂದೂತ್ವ ವಿಚಾರ ಬಂದಾಗ ಕೆರಳಿ ಕೆಂಡವಾಗುತ್ತಾರೆ.
ಸಂಘದ ಸೇನಾನಿಯಾಗಿರಲು ಮೊದಲು ಆದ್ಯತೆ ನೀಡುವ ಸಿ.ಟಿ.ರವಿ ಅವರು ರಾಜಕೀಯ ಅಖಾಡದಲ್ಲಿ ಆರ್ಎಸ್ಎಸ್ ವಿರುದ್ದದ ಟೀಕೆಗೆ ತಕ್ಷಣ ರಿಯಾಕ್ಟ್ ಮಾಡುತ್ತಾರೆ. ರವಿ ಅವರ ಈ ವೀಕ್ನೆಸ್ ಬಗ್ಗೆ ತಿಳಿದ ಕಾಂಗ್ರೆಸ್ ನಾಯಕರು ಆರ್ಎಸ್ಎಸ್ ವಿಚಾರಗಳನ್ನು ಮುಂದಿಟ್ಟು ಸಿ.ಟಿ.ರವಿ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಂಚೂಣಿಯಲ್ಲಿದ್ದಾರೆ.
ಆರೆಸ್ಸೆಸ್-ಬಿಜೆಪಿಯನ್ನು ತಾಲಿಬಾನಿಗಳಿಗೆ ಹೋಲಿಕೆ ಮಾಡಿದ್ದ ಸಿದ್ದರಾಮಯ್ಯ ಅವರಿಗೆ ಮೊನಚು ಮಾತಿನ ತೀಕ್ಷ್ಣ ಪದಗಳಿಂದ ತಿವಿದಿದ್ದ ಸಿ.ಟಿ.ರವಿ ವಿರುದ್ದ ಸಿದ್ದರಾಮಯ್ಯ ಮತ್ತೆ ಮತ್ತೆ ಟ್ವೀಟಾಸ್ತ್ರ ಪ್ರಯೋಗಿಸಿ ಕೆಣಕಿದ್ದಾರೆ. ಈ ಬಾರಿ ಮತ್ತೆ ಸರಣಿ ಟ್ವೀಟ್ ಮಾಡಿರುವ ಅವರು ಆರ್ಎಸ್ಎಸ್ ವಿಚಾರವನ್ನೇ ಮುಂದಿಟ್ಟಿದ್ದಾರೆ.
ಆರ್ ಎಸ್ ಎಸ್ ಎಂದ ಕೂಡಲೇ ಉರಿದುಬೀಳುವ @CTRavi_BJP ಅವರೇ,
ಆರ್ ಎಸ್ ಎಸ್ ಎಂದರೆ ಏನು?
ಅದರ ಜೊತೆ@BJP4India
ಸಂಬಂಧ ಏನು?
ಆರ್ ಎಸ್ ಎಸ್ ಎಂದರೆ ಏನು ಸಾಮಾಜಿಕ ಸೇವಾ ಸಂಘಟನೆಯೇ? ಸಾರ್ವಜನಿಕ ದತ್ತಿಯೇ? ಇಲ್ಲವೇ ಬಿಜೆಪಿ ಎಂಬ ರಾಜಕೀಯ ಪಕ್ಷಕ್ಕೆ ನಾಯಕರನ್ನು
ಉತ್ಪಾದಿಸಿ ಕೊಡುವ ಕಾರ್ಖಾನೆಯೇ?
1/7— Siddaramaiah (@siddaramaiah) September 28, 2021
ಆರ್ಎಸ್ಎಸ್ ಎನ್ನುವುದು ಹಿಂದೂಗಳ ಸಂಘಟನೆ ಎಂದು ನೀವು ಹೇಳುವುದಾದಾರೆ ಬಿಜೆಪಿಯಲ್ಲಿ ಇರುವವರು ಮಾತ್ರ ಹಿಂದೂಗಳೇ? ಬೇರೆ ಪಕ್ಷದವರು ಹಿಂದೂಗಳಲ್ಲವೇ? ದೆಹಲಿಯಲ್ಲಿ 10 ತಿಂಗಳಿಂದ ಬೀದಿಯಲ್ಲಿರುವವರು ಹಿಂದೂಗಳಲ್ಲವೇ? ವಾರದ ಹಿಂದೆ ಉತ್ತರಪ್ರದೇಶದಲ್ಲಿ ಅತ್ಯಾಚಾರಕ್ಕೀಡಾದ ದಲಿತ ಯುವತಿ ಹಿಂದೂ ಅಲ್ಲವೇ? ಎಂದು ಅವರು ಕೇಳಿದ್ದಾರೆ.
ಆರ್ ಎಸ್ ಎಸ್
ಎನ್ನುವುದು ಹಿಂದುಗಳ ಸಂಘಟನೆ ಎಂದು ನೀವು ಹೇಳುವುದಾದಾರೆ @BJP4Karnataka ಯಲ್ಲಿರುವವರು ಮಾತ್ರ ಹಿಂದೂಗಳೇ?ಬೇರೆ ಪಕ್ಷದವರು ಹಿಂದೂಗಳಲ್ಲವೇ?
ದೆಹಲಿಯಲ್ಲಿ 10 ತಿಂಗಳಿಂದ ಬೀದಿಯಲ್ಲಿರುವವರು ಹಿಂದುಗಳಲ್ಲವೇ?
ವಾರದ ಹಿಂದೆ ಉತ್ತರಪ್ರದೇಶದಲ್ಲಿ ಅತ್ಯಾಚಾರಕ್ಕೀಡಾದ ದಲಿತ ಯುವತಿ ಹಿಂದು ಅಲ್ಲವೇ?
2/7— Siddaramaiah (@siddaramaiah) September 28, 2021
ಆರ್ಎಸ್ಎಸ್ ಸಾಂಸ್ಕೃತಿಕ ಸಂಘಟನೆ ಎಂದಾದರೆ
ಅದರ ಸಂಸ್ಕೃತಿಯ ವ್ಯಾಖ್ಯಾನವೇನು? ಮಂಗಳೂರಿನಲ್ಲಿ ಅಮಾಯಕ ವಿದ್ಯಾರ್ಥಿ-ವಿದ್ಯಾರ್ಥಿನಿಗಳ ಮೇಲೆ ನಿಮ್ಮ ಪರಿವಾರದ ಗೂಂಡಾಗಳು ನಡೆಸಿದ ದೌರ್ಜನ್ಯ ಕೂಡಾ ಈ ಸಂಸ್ಕೃತಿಯಲ್ಲಿ ಸೇರಿದೆಯೇ? ಎಂಬುದು ಸಿದ್ದರಾಮಯ್ಯ ಪ್ರಶ್ನೆ.
ಆರ್ ಎಸ್ ಎಸ್ ಸಾಂಸ್ಕೃತಿಕ ಸಂಘಟನೆ ಎಂದಾದರೆ
ಅದರ ಸಂಸ್ಕೃತಿಯ ವ್ಯಾಖ್ಯಾನವೇನು?ನಿನ್ನೆ ತಾನೆ ಮಂಗಳೂರಿನಲ್ಲಿ ಅಮಾಯಕ ವಿದ್ಯಾರ್ಥಿ-ವಿದ್ಯಾರ್ಥಿನಿಗಳ ಮೇಲೆ ನಿಮ್ಮ ಪರಿವಾರದ ಗೂಂಡಾಗಳು ನಡೆಸಿದ ದೌರ್ಜನ್ಯ ಕೂಡಾ ಈ ಸಂಸ್ಕೃತಿಯಲ್ಲಿ ಸೇರಿದೆಯೇ?
3/7— Siddaramaiah (@siddaramaiah) September 28, 2021
ದೇಶ ಮತ್ತು ಹಿಂದುಗಳ ರಕ್ಷಣೆ ಮಾಡಲು ಆರ್ಎಸ್ಎಸ್ ನಾಯಕರಿಗೆ ಗುತ್ತಿಗೆ ಕೊಟ್ಟವರಾರು? ಆರ್ಎಸ್ಎಸ್ ನಾಯಕರೇನು ಜನರಿಂದ ಚುನಾಯಿತರಾದ ನಾಯಕರೇ? ಅವರು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಬಾರದು? ನಿಮ್ಮ ಎರಡು ಸಂಘಟನೆಗಳ ನಡುವೆ ಮುಖ ಯಾವುದು? ಮುಖವಾಡ ಯಾವುದು? ಎಂದು ಪ್ರಶ್ನೆ ಮಾಡಿ ಕೆಣಕಿದ್ದಾರೆ.
ದೇಶ ಮತ್ತು ಹಿಂದುಗಳ ರಕ್ಷಣೆ ಮಾಡಲು
ಆರ್ ಎಸ್ ಎಸ್ ನಾಯಕರಿಗೆ ಗುತ್ತಿಗೆ ಕೊಟ್ಟವರಾರು?
ಆರ್ ಎಸ್ ಎಸ್ ನಾಯಕರೇನು
ಜನರಿಂದ ಚುನಾಯಿತರಾದ ನಾಯಕರೇ?
ಅವರು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಬಾರದು?ನಿಮ್ಮ ಎರಡು ಸಂಘಟನೆಗಳ ನಡುವೆ ಮುಖ ಯಾವುದು? ಮುಖವಾಡ ಯಾವುದು?@CTRavi_BJP
4/7— Siddaramaiah (@siddaramaiah) September 28, 2021
ನಾನು ಮತ್ತು ನನ್ನಂತಹ ಕೋಟ್ಯಂತರ ಜನ ನಿರ್ಭೀತಿ ಮತ್ತು ಆತ್ಮಗೌರವದಿಂದ ಬದುಕುತ್ತಿರುವುದು ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ. ನಿಮ್ಮ ಪರಿವಾರದ ತಾಲಿಬಾನ್ ಗಿರಿಯನ್ನು ಅದೇ ಸಂವಿಧಾನದಿಂದ ಹಿಮ್ಮೆಟ್ಟಿಸುತ್ತೇವೆ ಎಂದು ಸಿದ್ದರಾಮಯ್ಯ ಅವರು ಗುದ್ದು ಕೊಡುವ ಪ್ರಯತ್ನ ಮಾಡಿದ್ದಾರೆ. https://twitter.com/siddaramaiah/status/1442809525208182792