ಬೆಂಗಳೂರು: ವೈವಾಹಿಕ ಜೀವನದಿಂದ ಬೇಸತ್ತು ಯಲಹಂಕ ತಾಲ್ಲೂಕು ಕೆಂಪಾಪುರ ಗ್ರಾಮದ ಯುವಕ ಮಂಜುನಾಥ್ (30) ಆತ್ಮಹತ್ಯೆ ಮಾಡಿಕೊಂಡಿದ್ದಾನೆನ್ನಲಾಗಿದೆ.
ಕಳೆದ 8 ತಿಂಗಳ ಹಿಂದೆಯಷ್ಟೆ ಮದುವೆ ಆಗಿದ್ದ ಮಂಜುನಾಥ್, ಮಂಗಳವಾರ ಸಂಜೆ ತನ್ನದೆ ಕಾಲೇಜಿನ ಕೊಠಡಿಯಲ್ಲಿ ನೇಣಿಗೆ ಕೊರಳೊಡ್ಡಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಈ ನಡುವೆ, ಮಂಜುನಾಥ್ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಸೂಕ್ತ ತನಿಕೆ ನಡೆಸುವಂತೆ ಅವರ ಆಪ್ತರು ಒತ್ತಾಯ ಮಾಡಿದ್ದಾರೆ. ಅದೆ ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲು ವರದಕ್ಷಿಣೆ, ಕಿರುಕುಳ ಎನ್ನುವ ಸಮಾಜ ಮಂಜುನಾಥ್ ಸಾವನ್ನ ಆತ್ಮಹತ್ಯೆ ಎನ್ನುವುದು ಸರಿಯಲ್ಲ ಎಂದು ಪೋಷಕರು, ಸ್ನೇಹಿತರು ಹೇಳಿಕೊಳ್ಳುತ್ತಿದ್ದಾರೆ.
ಮಾದನಾಯಕನಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಡೆತ್ ನೋಟ್ ದೊರೆತಿರುವುರಿಂದ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.