ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಜಾಗತಿಕ ಸುಂಕ ಕ್ರಮವನ್ನು ಅಮೆರಿಕಾ ಅಂತರರಾಷ್ಟ್ರೀಯ ವಾಣಿಜ್ಯ ನ್ಯಾಯಾಲಯ ಸಂಪೂರ್ಣ ರದ್ದುಪಡಿಸಿದೆ. 1974ರ ಟ್ರೇಡ್ ಕಾಯ್ದೆಯ ಸೆಕ್ಷನ್ 122 ಅಡಿಯಲ್ಲಿ ವಿಧಿಸಿದ 10% ಸುಂಕಕ್ಕೆ ಕಾನೂನು ಆಧಾರವಿಲ್ಲವೆಂದು ಕೋರ್ಟ್ ಸ್ಪಷ್ಟಪಡಿಸಿದೆ.
2-1 ಅಂಕಗಳಲ್ಲಿ ಬಂದ ತೀರ್ಪಿನಲ್ಲಿ ನ್ಯಾಯಮೂರ್ತಿಗಳು “1974ರ ಕಾನೂನಿನ ಆತ್ಮವೇ ಬೇರೆ; ಈಗಿನ ವ್ಯಾಪಾರ ಹಿನ್ನಡೆಗಳಿಗೆ ಇದನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
1970ರ ದಶಕದ “balance-of-payments” ಸಂಕಷ್ಟಕ್ಕೆ ಪರಿಹಾರವಾಗಿ ರಚಿಸಲಾದ ಈ ಕಾನೂನನ್ನು, ಟ್ರಂಪ್ ಆಡಳಿತವು current account deficit ಆಧಾರವಾಗಿ ಬಳಸಿರುವುದು ಕೋರ್ಟ್ ನಿಲುವಿನ ಪ್ರಕಾರ ಕಾನೂನು ಮೀರಿದ ಕ್ರಮ.
ಕಳೆದ ಫೆಬ್ರುವರಿಯಲ್ಲಿ ಸುಪ್ರೀಂ ಕೋರ್ಟ್ ತುರ್ತು ಅಧಿಕಾರಗಳ ಅಡಿಯಲ್ಲಿ ಟ್ರಂಪ್ ಹಾಕಿದ್ದ ಮೊದಲ ಸುಂಕ ಕ್ರಮವನ್ನೇ ರದ್ದುಪಡಿಸಿದ್ದ ನಂತರ, ಅವರು ಸೆಕ್ಷನ್ 122 ಬಳಸಿ 150 ದಿನಗಳ ಕಾಲ 15% ವರೆಗೆ ತಾತ್ಕಾಲಿಕ ಸುಂಕ ವಿಧಿಸಲು ಮುಂದಾಗಿದ್ದರು. ಆದರೆ ಈ ಕ್ರಮಕ್ಕೂ ಇದೀಗ ನ್ಯಾಯಾಂಗದಿಂದ “ಸ್ಟಾಪ್” ಬಂದಿದೆ.
ಈ ತೀರ್ಪು ಎರಡು ಆಮದು ಕಂಪನಿಗಳಾದ ಬರ್ಲ್ಯಾಪ್ ಅಂಡ್ ಬ್ಯಾರೆಲ್ ಮತ್ತು ಬೇಸಿಕ್ ಫನ್ ಪರವಾಗಿ ಬಂದಿದೆ. ಕೆಲವು ಡೆಮೊಕ್ರಾಟ್ ನಾಯಕತ್ವದ ರಾಜ್ಯಗಳ ಅರ್ಜಿಗಳನ್ನು ‘standing’ ಕೊರತೆಯಿಂದ ತಿರಸ್ಕರಿಸಲಾಗಿದೆ.
ತೀರ್ಪಿಗೆ ನ್ಯಾಯಮೂರ್ತಿ ಟಿಮೋಥಿ ಸ್ಟಾನ್ಸ್ಯೂ dissent ಸೂಚಿಸಿ, “ಅಧ್ಯಕ್ಷರ ಆರ್ಥಿಕ ನಿರ್ಧಾರಗಳನ್ನು ಕೋರ್ಟ್ ಮೀರಿಸಬಾರದು” ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ಪ್ರಕರಣ ಈಗ ಫೆಡರಲ್ ಸರ್ಕ್ಯೂಟ್ ಅಪೀಲು ನ್ಯಾಯಾಲಯ ಕಡೆಗೆ ತೆರಳುವ ಸಾಧ್ಯತೆ ಹೆಚ್ಚಿದೆ. ಮತ್ತೆ ಸುಪ್ರೀಂ ಕೋರ್ಟ್ ದ್ವಾರ ತಟ್ಟುವ ಸಂದರ್ಭವೂ ಬರಬಹುದೆಂದು ಕಾನೂನು ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಇದೇ ವೇಳೆ ಟ್ರಂಪ್ ಅವರ ಸುಂಕ ನೀತಿಗಳ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ. ಸೆನೆಟ್ ರಿಪಬ್ಲಿಕನ್ ನಾಯಕರಾದ ಮಿಚ್ ಮ್ಯಾಕ್ಕಾನಲ್ ಈಗಾಗಲೇ “ಸಂಸತ್ತನ್ನು ಬದಿಗಿಟ್ಟು ತುರ್ತು ಅಧಿಕಾರಗಳಿಂದ ಸುಂಕ ವಿಧಿಸುವುದು ಸರಿಯಲ್ಲ, ಇದು ಅಕ್ರಮ” ಎಂದು ಟೀಕಿಸಿದ್ದರು.























































