ಕೀವ್: ಉಕ್ರೇನ್ ಮೇಲಿನ ರಷ್ಯಾ ದಾಳಿ ಹಾಗೂ ಸಮರ ಸನ್ನಿವೇಶ ಆ ಎರಡು ರಾಷ್ಟ್ರಗಳ ಮೇಲಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿ ಪರಿಣಾಮ ಹಾಗೂ ಆತಂಕ ಮೂಡಿಸಿದೆ.
ಉಕ್ರೇನ್ ಮತ್ತು ರಷ್ಯಾ ನಡುವಿನ ಸಮರ ತೀವ್ತ ಸ್ವರೂಪ ತಾಳಿದ್ದು ಭಾರೀ ಸಾವು ನೋವಿಗೆ ಸಾಕ್ಷಿಯಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧಗಳಿಗೂ ಕ್ಯಾರೇ ಎನ್ನದ ರಷ್ಯಾ ಉಕ್ರೇನ್ ಮೇಲೆ ಗುರುವಾರ ಆರಂಭಿಸಿರುವ ಆಕ್ರಮಣ ಮುಂದುವರಿದಿದೆ.
#Russian fighters jet taken down by #Ukraine Air defense #UkraineInvasion pic.twitter.com/aHm0HLATjB
— Ghost of kyiv (@PilotJohn4) February 25, 2022
ಈ ನಡುವೆ, ಆಕ್ರಮಣನಿರತ ರಷ್ಯಾದ ಹತ್ತಾರು ಯುದ್ಧವಿಮಾನಗಳು ಹೆಲಿಕಾಪ್ಟರ್‌ಗಳು ಹಾಗೂ 30ಕ್ಕೂ ಹೆಚ್ಚು ಯುದ್ಧ ಟ್ಯಾಂಕ್‌ಗಳನ್ನು ಉಕ್ರೇನ್ ನಾಶ ಪಡಿಸಿದೆ. ಈ ದಾಳಿಯ ಸಂದರ್ಭದಲ್ಲಿ 800ಕ್ಕೂ ಹೆಚ್ಚು ರಷ್ಯನ್ ಸೈನಿಕರನ್ನು ತಾವು ಹೊಡೆದುರುಳಿಸಿದ್ದಾಗಿ ಉಕ್ರೇನ್ ಸರ್ಕಾರ ಹೇಳಿಕೊಂಡಿದೆ.
Putin you will pay for this in #TheHague war crime against humanity,
Putin Stop War ❌#PutinIsaWarCriminal #Putin #UkraineUnderAttack #Russia #WWIII#Ukraine #Russia #UkraineRussia pic.twitter.com/YHjPnTK8x4— Aditya Ranjan (@AdityaRanjan_29) February 25, 2022
ಇದೇ ವೇಳೆ, ಎದುರಾಳಿ ರಾಷ್ಟ್ರದ ಮೇಲೆ ಹಿಡಿತ ಸಾಧಿಸಿರುವ ರಷ್ಯಾ ಸೈನ್ಯವು ಉಕ್ರೇನ್‌ನ ರಾಜಧಾನಿ ಕೈವ್ ನಗರವನ್ನು ವಶಪಡಿಸುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
Serious war in Ukraine has started as rassian troops launch missiles pic.twitter.com/KbRdYADUvv
— Power Cable (@PowerCable3) February 25, 2022