‘ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ‘ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಪ್ರದಾನ ಮಾಡಿದರು. ಭಾರತದ ನಂ-1 ಚೆಸ್ ಆಟಗಾರ್ತಿ ಹಾಸನದ ಬಾಲಕಿ ‘ಚಾರ್ವಿ ಎ’ ಸೇರಿದಂತೆ 19 ಮಕ್ಕಳಿಗೆ ಈ ಪ್ರತಿಷ್ಠಿತ ಪುರಸ್ಕಾರವನ್ನು ನೀಡಿ ಗೌರವಿಸಿದರು.
ಶೌರ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ನಾವೀನ್ಯತೆ ವಿಭಾಗಗಳಲ್ಲಿ ತಲಾ ಒಂದು ಮಗು; ಸಮಾಜ ಸೇವೆಯ ವಿಭಾಗದಲ್ಲಿ ನಾಲ್ಕು ಮಕ್ಕಳು; ಕ್ರೀಡಾ ವಿಭಾಗದಲ್ಲಿ ಐವರಿಗೆ ಮತ್ತು ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ಏಳು ಮಕ್ಕಳಿಗೆ ಪ್ರಶಸ್ತಿ ನೀಡಲಾಗಿದೆ.
ಕರ್ನಾಟಕದ ‘ಚಾರ್ವಿ ಎ” ಸಾಧನೆಯ ಕಿರೀಟಕ್ಕೆ ಪದರಶಸ್ತಿಯ ಗರಿ:
ಭಾರತದ ನಂ. 1 ಶ್ರೇಯಾಂಕದ ಚೆಸ್ ಆಟಗಾರ್ತಿ ಎಣಿಸಿರುವ ಹಾಸನದ ಬಾಲಕಿ ‘ಚಾರ್ವಿ ಎ’ಗೆ ಸೋಮವಾರ ಕೇಂದ್ರ ಸರ್ಕಾರದ ಪ್ರತಿಷ್ಠಿತ ‘ಪ್ರಧಾನ ಮಂತ್ರಿ ಬಾಲ ಪುರಸ್ಕಾರ’ ಸಿಕ್ಕಿದೆ. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಚಾರ್ವಿ ಪ್ರಶಸ್ತಿ ಸ್ವೀಕರಿಸಿದರು.
ಹಾಸನ ಮೂಲದ ಕು.ಚಾರ್ವಿ ಎ. ಅವರು 8 ವರ್ಷದೊಳಗಿನವರ ವಿಶ್ವ ಚೆಸ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ವಿಜಯಶಾಲಿಯಾಗಿ “ವಿಶ್ವ ಚೆಸ್ ಚಾಂಪಿಯನ್” ಪದಕ ಗೆದ್ದಿದ್ದಾರೆ. ಅವರು ಜಾರ್ಜಿಯಾದ ಬಟುಮಿಯಲ್ಲಿ ನಡೆದ ಪ್ರತಿಷ್ಠಿತ ‘2022 ಚಾಂಪಿಯನ್ ಶಿಪ್’ನಲ್ಲಿ ಮೊದಲ ಸ್ಥಾನದಲ್ಲಿ ಗೆದ್ದು ಜಾಗತಿಕ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.
ಚಾರ್ವಿ ಯಶೋಗಾಥೆ ಹೀಗಿದೆ:
ಕು. ಚಾರ್ವಿ, ಈ ಹಿಂದೆ, ಶ್ರೀಲಂಕಾದಲ್ಲಿ ನಡೆದ 2022 ರ ಚಾಂಪಿಯನ್ಶಿಪ್ನಲ್ಲಿ ಅವರು ಯು-8 ಕಾಮನ್ವೆಲ್ತ್ ಚೆಸ್ ಚಾಂಪಿಯನ್ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ. 2022 ರಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಏಷ್ಯನ್ ಯೂತ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಐದು ಚಿನ್ನದ ಪದಕಗಳನ್ನು ಮತ್ತು ಒಂದು ಬೆಳ್ಳಿಯನ್ನು ಗೆದ್ದಿದ್ದಾರೆ.
2021 ಮತ್ತು 2022 ರಲ್ಲಿ ನಡೆದ ವಿವಿಧ ಚಾಂಪಿಯನ್’ಶಿಪ್’ನ ಅಂಡರ್-7, ಅಂಡರ್-8, ಮತ್ತು ಅಂಡರ್-10 ರಾಷ್ಟ್ರೀಯ ಚೆಸ್ ಚಾಂಪಿಯನ್ ಆಗಿ ಅವರು ಹೊರಹೊಮ್ಮಿದ್ದಲ್ಲದೆ, ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿಯೂ ತಮ್ಮ ಪ್ರಾಬಲ್ಯವನ್ನು ಸಣ್ಣ ಪ್ರಾಯದಲ್ಲೇ ಸಾಬೀತುಪಡಿಸಿದ್ದಾರೆ.
ಚಾರ್ವಿ, ಪ್ರಸ್ತುತ ಒಟ್ಟು ನಾಲ್ಕು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಮತ್ತು ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಹೊಂದಿದ್ದಾರೆ, ಇದು ಗಮನಾರ್ಹ ಸಾಧನೆಯಾಗಿದೆ. 2022 ರಲ್ಲಿ, ಅವರು ಆರು ಪ್ರಶಸ್ತಿಗಳನ್ನು ಗಳಿಸಿದ್ದಲ್ಲದೆ, ಕ್ರೀಡಾ ಜಗತ್ತಿನಲ್ಲಿ ದಾಖಲೆಯನ್ನು ಸ್ಥಾಪಿಸಿದರು. ಇದಲ್ಲದೆ, ಅವರು ಪ್ರಸ್ತುತ ಅಂಡರ್-8 ಮತ್ತು ಅಂಡರ್-10 ನ ಬಾಲಕಿಯರ ವಿಭಾಗದಲ್ಲಿ ಭಾರತದ ನಂ. 1 ಶ್ರೇಯಾಂಕದ ಚೆಸ್ ಆಟಗಾರ್ತಿಯಾಗಿದ್ದಾರೆ.
ಭಾರತದ ನಂ. 1 ಶ್ರೇಯಾಂಕದ ಚೆಸ್ ಆಟಗಾರ್ತಿ ಎಣಿಸಿದ ಬಾಲಕಿ ‘ಚಾರ್ವಿ’ಗೆ ಇದೀಗ ‘ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ ಸಿಕ್ಕಿದ್ದು, ಅವರಿಗೆ ಗಣ್ಯಾತಿ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.