ಅಯೋಧ್ಯೆ: ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಹೊಸ ಪರ್ವ ಆರಂಭವಾಗಿದೆ. ಶತಮಾನಗಳಿಂದ ಜನ ಕಾಯುತ್ತಿದ್ದ ಕ್ಷಣಕ್ಕೆ ಅಯೋಧ್ಯಾ ಕ್ಷೇತ್ರ ಸಾಕ್ಷಿಯಾಯಿತು. ಭವ್ಯ ರಾಮ ಮಂದಿರದ ಲೋಕಾರ್ಪಣೆ ಕಾರ್ಯಕ್ರಮ ಇಡೀ ದೇಶದಲ್ಲಿ ಹಬ್ಬದ ವಾತಾವರಣವನ್ನೇ ನಿರ್ಮಿಸಿತು.
ಸರಾಯು ನದಿ ತೀರದಲ್ಲಿ ನಿರ್ಮಾಣವಾಗಿರುವ ಭವ್ಯ ಶ್ರೀ ರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹ ಪ್ರಾಣ ಪ್ರತಿಷ್ಠಾ ಕೈಂಕರ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾದರು. ದೇಗುಲ ಆವರಣದಲ್ಲಿ ಜಮಾಯಿಸಿದ್ದ ಗಣ್ಯಾತಿಗಣ್ಯರು ವೈಭವೋಪೇತ ಕೈಂಕರ್ಯ ಕಂಡು ಮೂಕವಿಸ್ಮಿತರಾದರು. ಅದರಲ್ಲೂ ನಾಡಿನ ದೊರೆ ಪ್ರಧಾನಿ ನರೇಂದ್ರ ಮೋದಿಯವರು ಸ್ವಯಂಸೇವಕನಾಗಿ ಗಮನಸೆಳೆದರು. ಸಮಾರಂಭದಲ್ಲಿ ಭಾಗಿಯಾದ ಅತಿಥಿಗಳಿಗೆ ಪುಷ್ಪ ವೃಷ್ಟಿ ಮಾಡಿದ ಪ್ರಧಾನಿ ಮೋದಿ ಎಲ್ಲರ ಕುತೂಹಲದ ಕೇಂದ್ರಬಿಂದುವಾದರು.
#WATCH | Prime Minister Narendra Modi showers flower petals on the workers who were a part of the construction crew at Ram Temple in Ayodhya, Uttar Pradesh. pic.twitter.com/gJp4KSnNp6
— ANI (@ANI) January 22, 2024




































































