ಬೆಂಗಳೂರು: ಕೊರೋನಾ ಮೂರನೇ ಅಲೆ ಎಂಬಂತೆ ಸೋಂಕಿನ ಅಬ್ಬರ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ನಿಯಮಾವಳಿ ಜಾರಿಗೊಳಿಸಿದೆ. ಇದೇ ವೇಳೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೂಡಾ ಅಪಾರ್ಟ್ಮೆಂಟ್ ಹಾಗೂ ಹಾಸ್ಟೆಲ್‌ಗಳಿಗೆ ವಿಶೇಷ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅಪಾರ್ಟ್‌ಮೆಂಟ್‌ಗಳಲ್ಲಿನ ಕ್ರೀಡಾ ಹಾಗೂ ಮನೋರಂಜನಾ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ.
ಮಾರ್ಗಸೂಚಿಯ ಹೈಲೈಟ್ಸ್ ಹೀಗಿದೆ.
- ಅಪಾರ್ಟ್‌ಮೆಂಟ್ ಗಳಲ್ಲಿ ಟೆಂಪರೇಚರ್ ಚೆಕ್ ಮಾಡುವುದು ಕಡ್ಡಾಯ
- ಅಪಾರ್ಟ್‌ಮೆಂಟ್ ಗಳ ಕಾಮನ್ ಏರಿಯಾವನ್ನು ಸ್ಯಾನಿಟೈಸ್ ಮಾಡುತ್ತಿರಬೇಕು.
- ಫ್ಲಾಟ್ ಒಂದರಲ್ಲಿ ಮೂರಕ್ಕಿಂತ ಹೆಚ್ಚಿನ ಪ್ರಕರಣಗಳು ಪತ್ತೆಯಾದರೆ, ಇಡೀ ಮಹಡಿಯನ್ನು ಸೀಲ್ ಡೌನ್ ಮಾಡಬೇಕು.
- ಒಂದು ಸೋಂಕು ಪತ್ತೆಯಾದರೆ ಸೋಂಕು ಪತ್ತೆಯಾದ 100 ಮೀಟರ್ ಸುತ್ತಳತೆಯಲ್ಲಿರುವ ಎಲ್ಲವನ್ನೂ ಸೀಲ್ ಡೌನ್ ಮಾಡಿ ಸ್ವಯಂ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಗಳೇ ಕಂಟೈನ್ಮೆಂಟ್ ಝೋನ್ ಘೋಷಿಸಬೇಕು.
- ಹತ್ತು ಅಥವಾ ಅದಕ್ಕೂ ಅಧಿಕ ಕೇಸ್ ಪತ್ತೆಯಾದರೆ ಇಡೀ ಅಪಾರ್ಟ್‌ಮೆಂಟ್ ಸೀಲ್‌ಡೌನ್ ಮಾಡಬೇಕು.
- ಸೋಂಕು ಪತ್ತೆಯಾಗಿ ಕಂಟೈನ್ಮೆಂಟ್ ಝೋನ್ ಘೋಷಣೆಯಾದರೆ ಇಡೀ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಕೊರೋನಾ ಟೆಸ್ಟ್ ಮಾಡುವುದು.
- -ಅಪಾರ್ಟ್‌ಮೆಂಟ್ ನಿವಾಸಿಗಳ ಸಂಬಂಧಿಕರು, ಗೆಳೆಯರು, ಡೆಲಿವರಿ ಬಾಯ್ & ಎಲ್ಲಾ ವಿಸಿಟರ್ಸ್‌ಗೂ ಎರಡು ಡೋಸ್ ಆಗಿದ್ದರೆ ಮಾತ್ರ ಪ್ರವೇಶಾವಕಾಶ ನೀಡುವುದು
- ಕೋವಿಡ್ ಲಸಿಕಾಕರಣ, ಟೆಸ್ಟಿಂಗ್ ಸಂಬಂಧದ ಸೂಚನೆಗಳನ್ನು ನಿವಾಸಿಗಳಿಗೆ ತಿಳಿಸಲು ವ್ಯವಸ್ಥೆ ಮಾಡುವುದು
- ಅಪಾರ್ಟ್‌ಮೆಂಟ್‌ಗಳಲ್ಲಿನ ಜಿಮ್, ಸ್ವಿಮ್ಮಿಂಗ್ ಪೂಲ್, ಕ್ರೀಡಾಂಗಣ ಬಂದ್.
- ಲಿಫ್ಟ್ ಗಳಲ್ಲಿನ ಬಟನ್‌ಗಳನ್ನು ಬಳಕೆಗೆ ತಕ್ಕಂತೆ ಸ್ಯಾನಿಟೈಸ್ ಮಾಡುವುದು.
- ಅಪಾರ್ಟ್‌ಮೆಂಟ್‌ನಲ್ಲಿನ ಕಾರ್ಯಕ್ರಮಗಳಲ್ಲಿ 50 ಮಂದಿಗಷ್ಟೇ ಭಾಗವಹಿಸಲು ಅವಕಾಶ.
- ಮಕ್ಕಳ ಆರೋಗ್ಯ ಬಗ್ಗೆ ಹೆಚ್ಚು ನಿಗಾವಹಿಸುವುದು.
- ತ್ಯಾಜ್ಯಗಳ ವಿಲೇವಾರಿಗೆ ಶಿಸ್ತು ಬದ್ಧ ನಿಯಮ ಅನುಸರಿಸುವುದು.
- ಹೊರಗಡೆ ಹೋಗಿ ಬರುವ ನಿವಾಸಿಗಳಿಗೆ ಟೆಸ್ಟಿಂಗ್ ನಡೆಸುತ್ತಿರಬೇಕು.
- ಎಲ್ಲಾ ನಿವಾಸಿಗಳಿಗೂ ಎರಡು ಡೋಸ್ ಲಸಿಕೆಗೆ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ವ್ಯವಸ್ಥೆ ಮಾಡಬೇಕು.