ಉಡುಪಿ: ಸೇನೆ ಸೇರುವ ಉತ್ಸಾಹಿಗಳನ್ನು ಗುರುತಿಸಿ, ಅವರಿಗೆ ಸೂಕ್ತ ತರಬೇತಿ ನೀಡುವ ಮೂಲಕ ದೇಸದ ಗಮನಸೆಳೆದಿರುವ ಕರಾವಳಿಯ ‘ನೇಶನ್ಸ್ ಲವರ್’ ತಂಡ ಇದೀಗ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ. ಯುವಜನರಿಗೆ ಸೇನಾ ಪರೀಕ್ಷೆ ಎದುರಿಸುವ ಬಗ್ಗೆ ತರಬೇತಿ ನೀಡುತ್ತಿರುವ ಪ್ರಕ್ರಿಯೆ ಸಾಗಿದ್ದು, ಅದರ ಜೊತೆಯಲ್ಲೇ HOW TO FACE ARMY EXAM ಎಂಬ ಬಗ್ಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನೂ ಆಯೋಜಿಸಿದೆ.
ಸಾಮಾಜಿಕ ಕಾರ್ಯಕರ್ತ ಡಾ.ಗೋವಿಂದ ಬಾಬು ಪೂಜಾರಿ ಸಾರಥ್ಯದಲ್ಲಿ ಸಂಘಟನೆಗೊಳ್ಳುತ್ತಿರುವ ‘ನೇಶನ್ ಲವರ್’ ಸಂಸ್ಥೆ ಕೆಲವು ದಿನಗಳಿಂದ ನಿವೃತ್ತ ಸೇನಾನಿಗಳ ಮೂಲಕ ಯುವಕರಿಗೆ ತರಬೇತಿ ನೀಡುತ್ತಿದೆ. ಅದರ ಮುಂದುವರಿದ ಭಾಗವಾಗಿ ಡಿಸೆಂಬರ್ 24ರಂದು ಬೈಂದೂರಿನ ರೋಟರಿ ಭವನದಲ್ಲಿ ‘ಸೇನಾ ಪರೀಕ್ಷೆಯನ್ನು ಹೇಗೆ ಸುಲಭವಾಗಿ ಬರೆದು ಸೈನಿಕರಾಗಬಹುದು’ ಎಂಬ ಬಗ್ಗೆ ನಿವೃತ್ತ ಯೋಧರಾದ ಚಂದ್ರಶೇಖರ್ ನಾವಡ ಮತ್ತು ಗಣಪತಿ ಕಾರ್ವಿ ಸಹಿತ ಪರಿಣಿತರನೇಕರು ಮಾರ್ಗದರ್ಶನ ನೀಡಲಿದ್ದಾರೆ ಎಂದು ಉದ್ಯಮಿಯೂ ಆದ ನೇಶನ್ ಲವರ್ ಸಂಸ್ಥೆಯ ಗೌರವಾಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ತಿಳಿಸಿದ್ದಾರೆ.
ಈ ಕಾರ್ಯಕ್ರಮ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ‘ನೇಶನ್ ಲವರ್ಸ್’ ತಂಡದ ಪ್ರಮುಖ್ ಪ್ರಸಾದ್ ಪಿ.ಬೈಂದೂರ್, 25 ವರ್ಷದ ಒಳಗಿನ ಯುವ ಉತ್ಸಾಹಿ ದೇಶ ಭಕ್ತ ಯುವಕರಿಗಾಗಿ ಸೇನೆಯಲ್ಲಿ ಉದ್ಯೋಗ ಪಡೆದುಕೊಳ್ಳುವ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಎಂಥವರು ಇದಕ್ಕೆ ಅರ್ಹರು? ಅರ್ಹ ಯುವಕರು ಯಾವ ರೀತಿಯ ಪ್ರಯತ್ನ ನೆಡೆಸಬೇಕು? ನಿಮಗೆ ಸಾದ್ಯವಾಗದನ್ನು ಸಾಧ್ಯವಾಗುವ ಹಾಗೆ ಮಾಡಬಹುದು? ಎಂಬ ಬಗ್ಗೆ ಈ ಕಾರ್ಯಕ್ರಮದಲ್ಲಿ ತಜ್ಞರು ಪರಿಣಾಮಕಾರಿ ಮಾಹಿತಿ ನೀಡಲಿದ್ದಾರಂತೆ. NCC ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಅದರಲ್ಲೂ ಕೇವಲ 200 ಜನಕ್ಕೆ ಮಾತ್ರ ಅವಕಾಶ ಇದ್ದು, ಆಸಕ್ತರು 9538384853, 8496935149 ನಂಬರ್‌ಗೆ ಮೆಸೇಜ್ ಮಾಡು, ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ಪ್ರಸಾದ್ ಪಿ.ಬೈಂದೂರ್ ತಿಳಿಸಿದ್ದಾರೆ.
ಇದನ್ನೂ ಓದಿ.. ಏನಿದು ‘ನೇಶನ್ ಲವರ್ಸ್..’?
ದೇಶದ ಗಡಿ ಕಾಯಲು ಹೋಗುವ ಉತ್ಸಾಹಿ ಯುವಕರಿಗೆ ಬೆನ್ನೆಲುಬಾಗಿ ನಿಂತ ಗೋವಿಂದ ಬಾಬು ಪೂಜಾರಿ