ಉಡುಪಿ: ಬೈಂದೂರಿನ ಯುವ ಸೈನಿಕ ಪ್ರಶಾಂತ್ ದೇವಾಡಿಗ ನೇತೃತ್ವದ ನೇಶನ್ ಲವರ್ಸ್ ಬೈಂದೂರು ತಂಡದ ಗೌರವಧ್ಯಕ್ಷರಾಗಿ ಗೋವಿಂದ ಬಾಬು ಪೂಜಾರಿ ಮತ್ತು ಗೌರವ ಸಲಹೆಗಾರರಾಗಿ ಪ್ರಸಾದ್ ಬೈಂದೂರ್ ರವರನ್ನು ಸಂಸ್ಥೆ ಆಯ್ಕೆ ಮಾಡಿದೆ.
ಸಂಸ್ಥೆಯ ಮುಂದಿನ ಕಾರ್ಯಕ್ರಮ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಗೋವಿಂದ ಬಾಬು ಪೂಜಾರಿ, ಯುವಕರೇ ನಮ್ಮ ದೇಶದ ಆಸ್ತಿ ಹಾಗಾಗಿ ಬೈಂದೂರು ತಾಲುಕಿನ ಸಮೀಪದ ಯುವ ಮನಸ್ಸುಗಳಿಗೆ ದೇಶಪ್ರೇಮ ಹೆಚ್ಚಿಸಿ ಭಾರತೀಯ ಸೈನ್ಯಕ್ಕೆ ಆಯ್ಕೆಯಾಗಲು ಬೇಕಾಗುವ ತರಬೇತಿಗಳನ್ನು ಉಚಿತವಾಗಿ ನೀಡುವುದೇ ಮೂಲ ನಮ್ಮ ಉದ್ದೇಶವಾಗಿರುತ್ತದೆ.
ಒಂದು ಸಂಸ್ಥೆ; ಹತ್ತಾರು ಕಾರ್ಯಕ್ರಮ..
ಇದೇ ವೇಳೆ ಹಲವಾರು ದೇಶಪ್ರೇಮಿ ಯುವಕರಿಗೆ ಸ್ಫೂರ್ತಿಯ ಕಾರ್ಯಕ್ರಮ ನಡೆಸುವ ರೂಪುರೇಷೆ ಸಿದ್ದಪಡಿಸಿರುವುದಾಗಿ ಪ್ರಸಾದ್ ಬೈಂದೂರ್ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕರಾವಳಿ ಭಾಗದ ಯುವಕರಿಗೆ ಹಲವು ರೀತಿಯ ಕ್ರೀಡೆಗಳಿಗೆ ಪ್ರೋತ್ಸಾಹಿಸಿ ಎಲ್ಲಾ ರೀತಿಯ ತರಬೇತಿಗಳನ್ನು ಅನುಭವಿ ತರಬೇತುದಾರರನ್ನು ಕರೆಸಿ ಕರಾವಳಿ ಭಾಗದಿಂದ ಅತ್ಯಂತ ಹೆಚ್ಚು ಸೈನಿಕರನ್ನು ಭಾರತಾಂಬೆಯ ಮಡಿಲಿಗೆ ಒಪ್ಪಿಸಬೇಕು ಎನ್ನುವುದು ಸಂಸ್ಥೆಯ ಮೂಲ ಉದ್ದೇಶವಾಗಿರುತ್ತದೆ ಎಂದವರು ಹೇಳಿದ್ದಾರೆ.
ಇದರಂತೆ ಹಂತ ಹಂತವಾಗಿ ಬೇರೆ ಬೇರೆ ರೀತಿಯ ಸರ್ಕಾರಿ ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳುವ ತರಬೇತಿಗಳು ಮುಂದಿನ ದಿನಗಳಲ್ಲಿ ನೇಶನ್ ಲವರ್ಸ್ ಬೈಂದೂರು ಸಂಸ್ಥೆಯ ವತಿಯಿಂದ ಗೋವಿಂದ ಬಾಬು ಪೂಜಾರಿಯವರ ನೇತೃತ್ವದಲ್ಲಿ ಆಯೋಜಿಸಲಿದ್ದೇವೆ ಎಂದು ಸಂಸ್ಥೆಯ ಗೌರವ ಸಲಹೆಗಾರರಾದ ಪ್ರಸಾದ್ ಬೈಂದೂರ್ ತಿಳಿಸಿದ್ದಾರೆ.