ಬೆಂಗಳೂರು: ಪತ್ರಕರ್ತರ ಸಂಬಂಧ ಗೂಂಡಾಗಿರಿಯ ವರ್ತನೆ ತೋರಿದ ಪ್ರದೇಶ ಕಾಂಗ್ರೆಸ್ನ ರಾಜ್ಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮನವಿ ಮಾಡಿದ್ದಾರೆ. ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗೆ ಅವರು ಈ ಸಂಬಂಧ ಮನವಿಯೊಂದನ್ನು ಇಂದು ನೀಡಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ಕರೆದಿದ್ದರು. ಅದೇ ದಿನ ದೇಶದ ಗೃಹಸಚಿವ ಅಮಿತ್ ಶಾ ಹುಬ್ಬಳ್ಳಿಯಲ್ಲಿ ಇದ್ದರು. ಕೆಲ ಪತ್ರಕರ್ತರು ಡಿಕೆಶಿ ಸುದ್ದಿಗೋಷ್ಠಿಗೆ ಬಂದಿಲ್ಲ, ‘ಬಾರದವರ ಹೆಸರು ಬರೆದುಕೊಳ್ಳಿ. ಅವರ ಮ್ಯಾನೇಜ್ಮೆಂಟ್ ಜೊತೆ ಮಾತಾಡ್ತೀನಿ ಎಂದು ತಿಳಿಸಿದ ಶಿವಕುಮಾರ್, ಪತ್ರಕರ್ತರು ಚುನಾವಣಾ ಸಂದರ್ಭದಲ್ಲಿ ಒತ್ತಡದಲ್ಲಿ ಕೆಲಸ ಮಾಡುವುದನ್ನು ಮರೆತು ನಾನು ಪತ್ರಕರ್ತರನ್ನ ಕೊಂಡುಕೊಳ್ಳಬಲ್ಲೆ ಎಂದಿದ್ದಾರೆ. ಅವರ ಮ್ಯಾನೇಜ್ಮೆಂಟ್ ಹೇಳಿ ಕೆಲಸದಿಂದ ತೆಗೆಸುತ್ತೀನಿ ಅಂತ ಹೇಳಿದ್ದಾರೆ. ಅಲ್ಲದೆ ಗೂಂಡಾಗಿರಿ ವರ್ತನೆ ತೋರಿದ್ದಾರೆ ಎಂದು ದೂರಿನಲ್ಲಿ ಗಮನಸೆಳೆಯಲಾಗಿದೆ.
DK Shivkumar, Congress Chief Minister hopeful, openly threatened reporters in Bengaluru, who boycotted his press, for repeatedly turning up late.
DKS must realise, not all journalists are Claridges kinds, who sell their soul for some food and wine. Lot of them still have a spine. pic.twitter.com/sIhmEfMhmF— Amit Malviya (मोदी का परिवार) (@amitmalviya) April 25, 2023
ಪತ್ರಕರ್ತರ ಜೊತೆ ನಾವಿದ್ದೇವೆ; ಶೋಭಾ ಅಭಯ
ಸುದ್ದಿಗೋಷ್ಠಿಯಲ್ಲಿ ಡಿ.ಕೆ.ಶಿವಕುಮಾರ್ ಅವರು ನಡೆದುಕೊಂಡ ವರ್ತನೆ ಬಗ್ಗೆ ಕಿಟಿ ಕಾರಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪತ್ರಕರ್ತರ ಜೊತೆ ನಾವಿದ್ದೇವೆ ಎಂದು ಹೇಳಿದ್ದಾರೆ.
ಮಾಧ್ಯಮ ಹೇಳಿಕೆ ನೀಡಿರುವ ಶೋಭಾ ಕರಂದ್ಲಾಜೆ, ಪತ್ರಕರ್ತರನ್ನು ಹೆದರಿಸಿದ ಡಿಕೆಶಿ ವಿರುದ್ಧ ಕ್ರಮಕೈಗೊಳ್ಳಬೇಕು. ಕೂಡಲೇ ಡಿಕೆಶಿಗೆ ನೋಟೀಸ್ ಹೊರಡಿಸಬೇಕು ಅಂತ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಮತ್ತೊಂದು ದೂರು:
ಕಾಂಗ್ರೆಸ್ ಸೋಶಿಯಲ್ ಮೀಡಿಯಾ ದುರ್ಬಳಕೆ ಮೂಲಕ ಚುನಾವಣೆ ಗೆಲ್ಲಲು ಹೊರಟಿದೆ. ಸೋಶಿಯಲ್ ಮೀಡಿಯಾ ಕೆಟ್ಟದಾಗಿ ಬಳಸಿಕೊಂಡಿದ್ದಾರೆ. ತೆಲಂಗಾಣದ ವೀಡಿಯೋ ಬಳಸಿ, ಬಿಜೆಪಿಯ ಮೀಡಿಯಾ ವ್ಯಾನ್ಗೆ ಕಲ್ಲು ಹೊಡೆದಿದ್ದಾರೆ ಅಂತ ಬಿಂಬಿಸಿದ್ದಾರೆ ಎಂದು ಬಿಜೆಪಿ ಇನ್ನೊಂದು ದೂರು ನೀಡಿದೆ.
ಸೋಶಿಯಲ್ ಮೀಡಿಯಾ ಟೀಮ್ ಫೆÇೀರ್ಜರಿ ಮಾಡಿದ್ದಲ್ಲದೆ, ಸಮಾಜಕ್ಕೆ ತಪ್ಪು ಸಂದೇಶ ನೀಡುವ ಕೆಲಸ ಮಾಡಿದೆ. ಕಾಂಗ್ರೆಸ್ ಸೋಶಿಯಲ್ ಮೀಡಿಯಾವನ್ನ ಬ್ಯಾನ್ ಮಾಡಬೇಕು ಎಂದು ಬಿಜೆಪಿ ಮನವಿ ಮಾಡಿದೆ.