ಮಂಗಳೂರು: ಸಮುದ್ರದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ತೊಂದರೆಗೀಡಾದ ಮೀನುಗಾರಿಕಾ ದೋಣಿಯಿಂದ ಆರು ಮೀನುಗಾರರನ್ನು ಭಾರತೀಯ ಕರಾವಳಿ ಕಾವಲು ಪಡೆ (ICG) ಮಂಗಳವಾರ ಯಶಸ್ವಿಯಾಗಿ ರಕ್ಷಿಸಿದೆ.
ತುರ್ತು ಮಾಹಿತಿ ದೊರಕಿದ ತಕ್ಷಣ ಕಾರ್ಯಾಚರಣೆಗೆ ಇಳಿದ ಕರಾವಳಿ ಕಾವಲು ಪಡೆ, ತ್ವರಿತ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿ ಮೀನುಗಾರರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿತು. ಎಲ್ಲ ಆರು ಮಂದಿಯನ್ನು ಯಾವುದೇ ಅಪಾಯವಿಲ್ಲದೆ ರಕ್ಷಿಸಲಾಗಿದ್ದು, ಅಗತ್ಯ ನೆರವು ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ರಕ್ಷಣಾ ಕಾರ್ಯಾಚರಣೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಭಾರತೀಯ ಕರಾವಳಿ ಕಾವಲು ಪಡೆ ಹಂಚಿಕೊಂಡಿದೆ.

ಕರಾವಳಿ ಕಾವಲು ಪಡೆಯ ತ್ವರಿತ ಕಾರ್ಯಾಚರಣೆಯಿಂದ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
#WATCH | The Indian Coast Guard (ICG) on Tuesday rescued six fishermen from a distressed fishing boat off the Mangaluru coast amid rough sea conditions, ensuring their safe evacuation through swift search and rescue operations.
Follow the complete story on #PBSHABD. Register now… pic.twitter.com/ODndKsQltY
— PB-SHABD (@PBSHABD) June 30, 2026





































































