ನವದೆಹಲಿ: ಲೋಕಸಭಾ ಚುನಾವಣೆಯ ಫೈನಲ್ನಲ್ಲಿ ಇಂದು 8 ರಾಜ್ಯಗಳಲ್ಲಿ ಮತದಾನ ನಡೆಯುತ್ತಿದೆ. ಕೊನೆಯ ಹಂತದ ಲೋಕಸಭೆ ಚುನಾವಣೆಯಲ್ಲಿ 8 ರಾಜ್ಯ ಹಾಗೂ ಕೇಂದ್ರಾ ಡಳಿತ ಪ್ರದೇಶಗಳ ಒಟ್ಟು 57 ಲೋಕಸಭಾ ಕ್ಷೇತ್ರಗಳಲ್ಲಿ ಶನಿವಾರ ಮತದಾನ ಸಾಗಿದೆ.
ಒಟ್ಟು 7 ಹಂತಗಳಲ್ಲಿ ಮತದಾನ ಆಯೋಜಿತವಾಗಿದ್ದು, ಕಳೆದ 6 ಹಂತಗಳಲ್ಲಿ 486 ಕ್ಷೇತ್ರಗಳಲ್ಲಿ ಚುನಾವಣೆ ಮುಗಿದಿದೆ. ಶನಿವಾರ 7ನೇ ಹಂತದಲ್ಲಿ 57 ಕ್ಷೇತ್ರಗಳಲ್ಲಿ ಮತದಾನ ಸಾಗಿದೆ.
ಅಂತಿಮ ಹಂತದ ಮತದಾನ ನಡೆಯುವ ರಾಜ್ಯಗಳು:
- ಉತ್ತರ ಪ್ರದೇಶದಲ್ಲಿ 13 ಕ್ಷೇತ್ರಗಳು,
- ಪಂಜಾಬ್ನಲ್ಲಿ 13 ಕ್ಷೇತ್ರಗಳು,
- ಬಿಹಾರ್ದಲ್ಲಿ 8 ಕ್ಷೇತ್ರಗಳು,
- ಪಶ್ಚಿಮ ಬಂಗಾಲದಲ್ಲಿ 9 ಕ್ಷೇತ್ರಗಳು,
- ಒಡಿಶಾದಲ್ಲಿ 6 ಕ್ಷೇತ್ರಗಳು,
- ಹಿಮಾಚಲ ಪ್ರದೇಶದಲ್ಲಿ 4 ಕ್ಷೇತ್ರಗಳು,
- ಝಾರ್ಖಂಡ್ನಲ್ಲಿ 3 ಕ್ಷೇತ್ರಗಳು
- ಚಂಡೀಗಢದಲ್ಲಿ 1 ಕ್ಷೇತ್ರ.
ಇದೇ ವೇಳೆ, ಒಡಿಶಾದಲ್ಲಿ 42 ವಿಧಾನಸಭೆ ಕ್ಷೇತ್ರಗಳಿಗೂ ಮತದಾನ ನಡೆಯುತ್ತಿದೆ.