ವಾರಣಾಸಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ
ಉತ್ತರ ಪ್ರದೇಶ ರಾಜ್ಯದ
ವಾರಣಾಸಿಯ ಹನುಮಾನ್ ಘಾಟ್‌ನಲ್ಲಿ ಕರ್ನಾಟಕದ ಆಸ್ತಿಕರಿಗೆ ಸಕಲ ಸೌಲಭ್ಯ ಕಲ್ಪಿಸುವತ್ತ ರಾಜ್ಯದ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಕ್ರಮ ಕೈಗೊಂಡಿದ್ದಾರೆ. ಇಂದು ಅವರು ವಾರಣಾಸಿಗೆ ನೀಡದ ಭೇಟಿ ಗಮನಸೆಳೆಯಿತು.
ವಾರಣಾಸಿಯ ಹನುಮಾನ್ ಘಾಟ್‌ನಲ್ಲಿ ಕರ್ನಾಟಕ ಭವನ ಛತ್ರಕ್ಕೆ ಇಂದು ಸಾರಿಗೆ ಮತ್ತು ಮಂಜುರಾಯಿ ಸಚಿವರಾದ ರಾಮಲಿಂಗ ರೆಡ್ಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು,
ಕರ್ನಾಟಕ ಭವನ ಛತ್ರ 1927 ನಿರ್ಮಿಸಿದ್ದು,
ಇದೇ ವೇಳೆ ಕರ್ನಾಟಕ ಭವನದ ಛತ್ರ, ಕೊಠಡಿಗಳನ್ನು ಅಭಿವೃದ್ಧಿ ಪಡಿಸಲು ನಿಶ್ಚಯಿಸಿದ್ದು, ಕೆಲವೇ ದಿನಗಳಲ್ಲಿ ಕೆಲಸ ಪ್ರಾರಂಭವಾಗಿ ಎಲ್ಲ ಸುಸಜ್ಜಿತವಾಗಿ ಅಭಿವೃದ್ಧಿಯಾಗಲಿದೆ, ಎಂದು ಸಚಿವರು ಮಾಹಿತಿ ನೀಡಿದರು.
ಕಾಶಿಯ ಕರ್ನಾಟಕ ಭವನ ಛತ್ರ:
ಕಾಶಿಯಲ್ಲಿ ರೂ.5 ಕೋಟಿ ವೆಚ್ಚದಲ್ಲಿ ಕರ್ನಾಟಕ ಭವನ ನವೀಕರಣ ಕಾರ್ಯ-
ಸಾರಿಗೆ-ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರಿಂದ ತ್ವರಿತ ಕ್ರಮ,
ವಾರಣಾಸಿಯ ಹನುಮಾನ್ ಘಾಟ್ ನಲ್ಲಿರುವ ಕರ್ನಾಟಕ ಭವನ ಛತ್ರ,
ಕರ್ನಾಟಕ ಛತ್ರವು 1927 ರಲ್ಲಿ ಮೈಸೂರು ಮಹಾರಾಜರು ನಿರ್ಮಿಸಿದ್ದ ಕಟ್ಟಡ,
ನಂತರ ಇದರ ಹಿಂಭಾಗದಲ್ಲಿ 2004ರಲ್ಲಿ ಕರ್ನಾಟಕ ಸರ್ಕಾರದಿಂದ ಒಂದು ಕಟ್ಟಡ ನಿರ್ಮಿಸಲಾಗಿತ್ತು.
1927ರ ಛತ್ರವು ಪುನರ್ ನವೀಕರಣವಿಲ್ಲದೆ ಶಿಥಿಲಾವಸ್ಥೆಗೆ ತಲುಪಿದೆ.
ಮತ್ತೊಂದು ಕಟ್ಟಡದಲ್ಲೂ ಮೂಲಭೂತ ಸೌಲಭ್ಯಗಳ ಕೊರತೆ ಇದೆ.
ಪರಿಸ್ಥಿತಿ ಅರಿತ ಸಚಿವ ರಾಮಲಿಂಗಾರೆಡ್ಡಿ ಅವರಿಂದ ಸುಧಾರಣಾ ಕ್ರಮ
5 ಕೋಟಿ ವೆಚ್ಚದಲ್ಲಿ ನವೀಕರಣ ಕಾರ್ಯಕ್ಕೆ ಮುನ್ನುಡಿ,
ನವೀಕರಣ ಪ್ರಕ್ರಿಯೆಗೆ ಇದೀಗ ಅಂತಿಮ ಸ್ಪರ್ಶ
ರಾಜ್ಯದಿಂದ ತೆರಳುವ ಭಕ್ತರಿಗೆ ಸಮರ್ಪಕ ಸೌಲಭ್ಯ ಒದಗಿಸಬೇಕಿದೆ ಹಾಗಾಗಿ ಈ ಕ್ರಮ ಎನ್ನುತ್ತಿರುವ ಸಚಿವ ರಾಮಲಿಂಗಾರೆಡ್ಡಿ.
ಇದೇ ವೇಳೆ, ಕಾಶಿಯ ಜಂಗಮವಾಡಿ ಮಠಕ್ಕೆ ಭೇಟಿ ನೀಡಿದ ಸಚಿವ ರಾಮಲಿಂಗಾರೆಡ್ಡಿ ಅವರು, ಜಗದ್ಗುರು ಶ್ರೀ ಚಂದ್ರಶೇಖರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.