ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಜೀವ ಉಳಿಸಿಕೊಳ್ಳಲು ಇಡೀ ಜಗತ್ತು ಲಸಿಕೆಯ ಮೊರೆ ಹೋಗಿರುವುದು ಎಲ್ಲರಿಗೂ ತಿಳಿದ್ದಿದೆ. ಭಾರತದಲ್ಲೂ ಕೋಟ್ಯಾಂತರ ಜನರು ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಆದರೆ ಇದೀಗ ಕೋವಿಶೀಲ್ಡ್ ಲಸಿಕೆಯ ಅಡ್ಡ ಪರಿಣಾಮಗಳ ಬಗ್ಗೆ ತೀವ್ರ ಚರ್ಚೆ ನಡೆದಿದೆ.
ಕೋವಿಶೀಲ್ಡ್ ಲಸಿಕೆ ಕುರಿತು ವಿರೋಧ ಪಕ್ಷಗಳು ಅದರಲ್ಲೂ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಆದರೆ, ಯಾವುದೇ ಲಸಿಕೆ ಪಡೆದಾಗಲೂ ಕೆಲವು ಸೌಮ್ಯ ಅಡ್ಡ ಪರಿಣಾಮಗಳು ಇದ್ದೇ ಇರುತ್ತವೆ.
ಕೋವಿಶೀಲ್ಡ್ ಲಸಿಕೆಯಿಂದ ಆಗಬಹುದಾದ ಅಡ್ಡ ಪರಿಣಾಮ ಅತಿ ವಿರಳ. ಕೊರೋನಾದಿಂದ ಕಾಪಾಡಿದ್ದೇ ವ್ಯಾಕ್ಸಿನ್.
ಬಹುತೇಕ ಅಡ್ಡ ಪರಿಣಾಮಗಳು ಲಸಿಕೆ ಪಡೆದ ಕೆಲವೇ… pic.twitter.com/lkR0Wj9eBv
— BJP Karnataka (@BJP4Karnataka) May 3, 2024
ಕೋವಿಶೀಲ್ಡ್ ಲಸಿಕೆಯಿಂದ ಆಗಬಹುದಾದ ಅಡ್ಡ ಪರಿಣಾಮ ಅತಿ ವಿರಳ. ಕೊರೋನಾದಿಂದ ಕಾಪಾಡಿದ್ದೇ ವ್ಯಾಕ್ಸಿನ್. ಬಹುತೇಕ ಅಡ್ಡ ಪರಿಣಾಮಗಳು ಲಸಿಕೆ ಪಡೆದ ಕೆಲವೇ ತಿಂಗಳಲ್ಲಿ ಕಂಡು ಬರುತ್ತವೆ. ಈಗಾಗಲೇ ಲಸಿಕೆ ಪಡೆದು ಮೂರು ವರ್ಷ ಕಳೆದ ಕಾರಣ ಜನತೆ ಆತಂಕ ಪಡಬೇಕಾಗಿಲ್ಲ ಎಂದು ಡಾ.ಸಿ.ಎನ್.ಮಂಜುನಾಥ್ ಹೇಳಿರುವ ವೀಡಿಯೊದೊಂದಿಗೆ ಟ್ವೀಟ್ ಮಾಡಿದೆ.