ಬೆಳಗಾವಿ: ರಾಜ್ಯ ಸಾರಿಗೆ ನಿಗಮಗಳ ನೌಕರರ ಮುಷ್ಕರ ಹಠಾತ್ ತಿರುವು ಪಡೆದುಕೊಂಡಿದೆ. ಅಚ್ಚರಿಯ ಕ್ರಮವೊಂದರಲ್ಲಿ ಸಾರಿಗೆ ನೌಕರರ ಮುಷ್ಕರದ ನೇತೃತ್ವ ವಹಿದ್ದಾರೆನ್ನಲಾದ ರೈತ ಸಂಘಟನೆಯ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕೆಸ್ಸಾರ್ಟಿಸಿ ನೌಕರರ ಹೋರಾಟವನ್ನು ತೀವ್ತಗೊಳಿಸುವ ಸಂಬಂಧ ಇಂದು ಮುಖಂಡರ ಸಭೆಯನ್ನ ಕೋಡಿಹಳ್ಳಿ ಚಙದ್ರಶೇಖರ್ ಕರೆದಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಪೊಲೀಸರು ಕೋಡಿಹಳ್ಳಿ ಚಂದ್ರಶೇಖರ್ ಅವರನ್ನ ವಶಕ್ಜೆ ಪಡೆದುಕೊಂಡಿದ್ದಾರೆನ್ನಲಾಗಿದೆ. ಬೆಳಗಾವಿಯಲ್ಲಿ ಚಂದ್ರಶೇಖರ್ ತಂಗಿದ್ದ ಹೊಟೇಲ್‌ಗೆ ತೆರಳಿದ ಪೊಲೀಸರು ಅವರನ್ನು ಕರೆದೊಯ್ದರೆನ್ನಲಾಗಿದೆ.
ಸಾರಿಗೆ ಸಂಸ್ಥೆ ನೌಕರರ ಮುಷ್ಕರದಿಂದಾಗಿ ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಏರುಪೇರಾಗಿದೆ. ಸಾರಿಗೆ ಕೂಡಾ ಅಗತ್ಯ ಸೇವೆಯ ವ್ಯಾಪ್ತಿಯಲ್ಲಿ ಬರುವುದರಿಂದ ಮುಷ್ಕರ ನಿಷೇಧಿಸಿ ಸರ್ಕಾರ ಆದೇಶಿಸಿದ್ದು ಎಸ್ಮಾ ಅಸ್ತ್ರ ಪ್ರಯೋಗದ ಎಚ್ಚರಿಕೆಯನ್ನೂ ನೀಡಿದೆ. ಇದರ ಬೆನ್ನಲ್ಲೇ ಕೆಸ್ಸಾರ್ಟಿಸಿ ನೌಕರರ ಮುಷ್ಕರದ ನೇತೃತ್ವ ವಹಿಸಿರಿವ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಪೊಲೀಸರು ವಶಕ್ಕೆ ಪಡೆಯುವ ಮೂಲಕ ಒಟ್ಟಾರೆ ಬೆಳವಣಿಗೆಗಳಿಗೆ ರೋಚಕತೆಯ ತಿರುವು ನೀಡಿದ್ದಾರೆ.