ಮಂಗಳೂರು : ಸರಣಿ ವೈದಿಕ ಕೈಂಕರ್ಯಗಳಿಗೆ ಸಾಕ್ಷಿಯಾಗುತ್ತಿರುವ, ಅದ್ಧೂರಿ ಮಹೋತ್ಸವಗಳ ಮೂಲಕ ಭಕ್ತಸಾಗರದ ಗಮನಸೆಳೆಯುವ ಮಂಗಳೂರಿನ ಕಾರ್‌ಸ್ಟ್ರೀಟ್ ಶ್ರೀ ವೆಂಕಟರಮಣ ದೇವಾಲಯವು ಶನಿವಾರ ಅಪರೂಪದ ಸನ್ನಿವೇಶದಿಂದ ಆಸ್ತಿಕರ ಚಿತ್ತ ಸೆಳೆಯಿತು. ಮಂಗಳೂರಿನ ಖ್ಯಾತ ಸಾಹುಕಾರ್ ಎಂ . ವೆಂಕಟೇಶ್ ರಂಗ ಪೈ ಕುಟುಂಬದ ವತಿಯಿಂದ ಖ್ಯಾತ ಉದ್ಯಮಿ ಹಾಗೂ ವಾಸ್ತುಶಿಲ್ಪಿ ವೆಂಕಟೇಶ್ ಪೈ ಅವರು ಶ್ರೀ ವೆಂಕಟರಮಣ ದೇವಸ್ಥಾನದ ಪ್ರಕಾರದಲ್ಲಿ ಪ್ರತಿಷ್ಠಾಪಿಸಲು ನೂತನವಾಗಿ ನಿರ್ಮಿಸಲ್ಪಟ್ಟ ರಜತ ಅಷ್ಟ ಲಕ್ಷ್ಮಿಯ ವಿಗ್ರಹಗಳನ್ನು ಸಮರ್ಪಿಸಿದರು.
ಈ ರಜತ ಅಷ್ಟ ಲಕ್ಷ್ಮಿಯ ವಿಗ್ರಹಗಳನ್ನು ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ ದಿಗ್ವಿಜಯದ ದಿನದಂದು ಸಮರ್ಪಿಸಲಾಯಿತು .
ಈ ಸಂದರ್ಭದಲ್ಲಿ ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ , ಸತೀಶ್ ಪ್ರಭು , ಸುರೇಶ ವಿ ಕಾಮತ್ , ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಚಂದ್ರಕಾಂತ್ ಭಟ್, ವೇದಮೂರ್ತಿ ವೈಕುಂಠ ಭಟ್ ಉಪಸ್ಥಿತರಿದ್ದರು .







































































