ಅಭಯಾರಣ್ಯದ ರಸ್ತೆ ಮಧ್ಯೆ ಎದುರಾದ ರೋಮಾಂಚಕಾರಿ ಸನ್ನಿವೇಶವಿದು. ಈಶಾನ್ಯ ರಾಜ್ಯಗಳಲ್ಲಿನ ಕಾಡುಗಳ ನಡುವೆ ಇರುವ ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಗೆ ವನ್ಯಜೀವಿಗಳು ಎದುರಾಗುವುದು ಸಾಮಾನ್ಯ. ಇದೇ ರೀತಿ ಕಾಜಿರಂಗಾ ಅಭಯಾರಣ್ಯದ ಮಧ್ಯೆ ವಾಹನದಲ್ಲಿ ತೆರಳುತ್ತಿರುವ ಮಂದಿಗೆ ಹಠಾತ್ತನೆ ಖಡ್ಗಮೃಗವೊಂದು ಎದುರಾಗಿದೆ. ಈ ದೈತ್ಯ ಪ್ರಾಣಿಯನ್ನು ಕಂಡ ಜನ ಬೆಚ್ಚಿಬಿದ್ದಿದ್ದಾರೆ.
ಈ ಮೃಗ ರಸ್ತೆ ದಾಟುವ ವರೆಗೂ ಜನ ವಾಹನದೊಳಗೆ ಭಯದಿಂದಲೇ ಕಾಲಕಳೆದರು. ಅಷ್ಟರಲ್ಲೇ ಒಂದು ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದು ಮತ್ತಷ್ಟು ಆತಂಕಕ್ಕೆ ಕಾರಣವಾಯಿತು. ಒಂದೆಡೆ ಬೆಂಕಿ, ಮತ್ತೊಂದೆಡೆ ಕ್ರೂರ ಮೃಗ. ಇಂತಹಾ ಸನ್ನಿವೇಶದಲ್ಲೂ ಜನರು ಪ್ರಾಣ ಉಳಿಸಲು ವಾಹನದಿಂದ ಇಳಿಯಲೇಬೇಕಾಯಿತು.
ಅದೃಷ್ಟವಶಾತ್ ಖಡ್ಗಮೃಗ ಕೂಡಾ ಜಾಗ ಖಾಲಿ ಮಾಡಿದ್ದರಿಂದ ಜನ ನಿಟ್ಟುಸಿರುಬಿಟ್ಟರು ಆದರೆ ವಾಹನ ಮಾತ್ರ ಭಸ್ಮವಾಗಿದೆ. ಹೊಟ್ಟೆಪಾಡಿಗಾಗಿ ಈ ವಾಹನವನ್ನೇ ಅವಲಂಬಿಸಿದ್ದ ಬಡಪಾಯಿ ಮಾತ್ರ ಕಂಗಾಲಾಗಿದ್ದಾನೆ.