ಬಿಡುಗಡೆಯಾಗದ ‘ಕೋಟಿಗೊಬ್ಬ-3’ ಸಿನಿಮಾ.. ಕಿಚ್ಚನ ಅಭಿಮಾನಿಗಳ ರೊಚ್ಚು.. ಸುದೀಪ್ ಬೆಂಬಲಿಗರ ದಾಂಧಲೆ.. ಥಿಯೇಟರ್‌ಗೆ ನುಗ್ಗಿ ಯುವಕನಿಗೆ ಥಳಿತ..
https://twitter.com/alvinviews/status/1448582570350768131?t=CC5oGDG5iNqe0xWQXORGGw&s=08
ಇದು ಕಿಚ್ಚನ ಅಭಿಮಾನಿಗಳು ರೊಚ್ಚಿಗೆದ್ದ ಸಂದರ್ಭದಲ್ಲಿ ನಡೆದ ದಾಂದಲೆಯ ದೃಶ್ಯ..
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮಹಾನವಮಿಯ ದಿನವಾದ ಗುರುವಾರ ‘ಕೋಟಿಗೊಬ್ಬ 3’ ಚಿತ್ರ ತೆರೆ ಕಾಣಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಮೊದಲ ಪ್ರದರ್ಶನ ರದ್ದಾಗಿದೆ. ಇದರಿಂದ ಸುದೀಪ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.
ಹಲವೆಡೆ ಪ್ರತಿಭಟನೆ ನಡೆದರೆ, ವಿಜಯಪುರದಲ್ಲಿ ಹೊಡೆದಾಟ ಬಡಿದಾಟವೇ ನಡೆದಿದೆ. ‘ಕೋಟಿಗೊಬ್ಬ-3’ ಮೊದಲ ಪ್ರದರ್ಶನ ನೋಡುವ ಕಾತುರದಲ್ಲಿದ್ದ ಅಭಿಮಾನಿಗಳು, ಪ್ರದರ್ಶನ ರದ್ದಾಗಿದೆ ಎಂದು ಗೊತ್ತಾಗುತ್ತಿದ್ದಂತೆಯೇ ರೊಚ್ಚಿಗೆದ್ದರು. ಉದ್ರಿಕ್ತರು, ದಾಂಧಲೆ, ಕಲ್ಲು ತೂರಾಟ ನಡೆಸಿ ಆಕ್ರೋಶ ಹೊರಹಾಕಿದರು.
ವಿಜಯಪುರ ನಗರದ ಡ್ರಿಮಲ್ಯಾಂಡ್ ಚಿತ್ರ ಮಂದಿರ ಬಳಿ ಈ ಗಲಾಟೆ ನಡೆದಿದ್ದು, ಕಿಚ್ಚಾ ಕಿಚ್ಚಾ ಎಂದು ಉದ್ರಿಕ್ತರು ಘೋಷಣೆ ಕೂಗಿದ ಅಭಿಮಾನಿಗಳು. ಬಂದ್ ಮಾಡಿರುವ ಪ್ರವೇಶ ದ್ಚಾರಕ್ಕೆ ಕಾಲಿನಿಂದ ಒದ್ದು ಆಕ್ರೋಶ ಹೊರಹಾಕಿದರು. ಚಿತ್ರ ಮಂದಿರದ ಲೈಟ್ ಪುಡಿ ಮಾಡಿದರು.
150 ರಿಂದ 500 ರೂಪಾಯಿ ಕೊಟ್ಟು ಟಿಕೆಟ್ ಪಡೆದಿದ್ದ ಅಭಿಮಾನಿಗಳು ಚಿತ್ರಮಂದಿರದ ಬಾಗಿಲಿಗೆ ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿದರು. ಚಿತ್ರಮಂದಿರದಲ್ಲಿದ್ದ ಯುವಕನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆಯಂತೂ ಭಯಾನಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು.