ಬೆಂಗಳೂರು: ಕೊರೋನಾ ಸೋಂಕು ನಿಯಂತ್ರಣ ಸಂಬಂಧ ರಾಜ್ಯಾದ್ಯಂತ ಲಾಕ್‌ಡೌನ್ ರೀತಿ ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಈ ಕ್ರಮದಿಂದಾಗಿ ದುಡಿಯುವ ವರ್ಗ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಿದೆ.
ಮಹತ್ವದ ನಿರ್ಧಾರವೊಂದರಲ್ಲಿ ಸಿಎಂ ಯಡಿಯೂರಪ್ಪ ಅವರು ಶ್ರಮಿಕವರ್ಗಕ್ಕೆ ನೆರವಿನ ಪ್ಯಾಕೇಜ್ ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ವಿವಿಧ ಕುಲಕಸಬು ನಿರತರಿಗೆ ಹಾಗೂ ಶ್ರಮಿಕ ವರ್ಗದವರಿಗೆ ಆರ್ಥಿಕ ನೆರವು ಪ್ರಕಟಿಸಿದರು.
- ರಾಜ್ಯ ಸರ್ಕಾರದಿಂದ 1250 ಕೋಟಿ ರೂಪಾಯಿಗಳ ಆರ್ಥಿಕ ಪರಿಹಾರ ಘೋಷಣೆ.
- ಆಂಘಟಿತ ಕಾರ್ಮಿಕರಿಗೆ ತಾಲಾ 2 ಸಾವಿರ ರೂಪಾಯಿ ಆರ್ಥಿಕ ನೆರವು.
- ಹೂ ತರಕಾರಿ ನಷ್ಟಕ್ಕೊಳಗಾದವರಿಗೆ ಹೆಕ್ಟೇರ್‌ಗೆ ತಲಾ 10 ಸಾವಿರ ರೂಪಾಯಿ ಧನ ಸಹಾಯ.
- ಹೂ ಹಣ್ಣು ತರಕಾರಿ ಮಾರಾಟಗಾರರಿಗೆ ತಲಾ 3 ಸಾವಿರ ರೂಪಾಯಿ.
- ಬೀದಿ ಬದಿ ವ್ಯಾಪಾರಸ್ಥರಿಗೆ ತಲಾ 2 ಸಾವಿರ ರೂಪಾಯಿ ಸಹಾಯಸ್ತ.
- ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಊಟ
- ಕ್ಷೌರಿಕ, ಮಡಿವಾಳ ಸಮಾಜ ಸಹಿತ ಕುಲಕಸುಬು ಅವಲಂಬಿತರಿಗೆ ಆರ್ಥಿಕ ನೆರವು.
- ಸವಿತಾ ಸಮಾಜದವರಿಗೆ ತಲಾ 3ಸಾವಿರ ರೂಪಾಯಿ ಪರಿಹಾರ.
- ಆಟೋ ಟ್ಯಾಕ್ಸಿ ಚಾಲಕರಿಗೆ ತಲಾ 3 ಸಾವಿರ ರೂಪಾಯಿ ಆರ್ಥಿಕ ನೆರವು.
- ಎಲ್ಲಾ ಕಲಾವಿದರಿಗೆ ತಲಾ 3 ಸಾವಿರ ರೂಪಾಯಿ ಘೋಷಣೆ.
- ಗರೀಬ್ ಕಲ್ಯಾಣ್ ಯೋಜನೆಯಡಿ ತಿಂಗಳಿಗೆ 5 ಕೆಜಿ ಅಕ್ಕಿ ವಿತರಣೆ.
- ಎಪಿಎಲ್ ಕಾರ್ಡ್ ಹೊಂದಿದ ಕುಟುಂಬದವರಿಗೆ ಕೆಜಿಗೆ 15 ರೂಪಾಯಿ ದರದಲ್ಲಿ ಪಡಿತರ ಅಕ್ಕಿ ವಿತರಣೆ.