ಅಯೋಧ್ಯೆ: ಪ್ರಭು ಶ್ರೀರಾಮಚಂದ್ರನ ಭವ್ಯ ದೇಗುಲ ಲೋಕಾರ್ಪಣೆಗೊಳ್ಳಲು ಸಜ್ಜಾಗುತ್ತಿದೆ. ಜನವರಿ 22ರಂದು ರಾಮ ಮಂದಿರದಲ್ಲಿ ವಿಗ್ರಹ ಪ್ರತಿಷ್ಠಾಪನೆಯಾಗಲಿದೆ. ದೇಶಾದ್ಯಂತ ಕೋಟ್ಯಂತರ ಜನರ ಚಿತ್ತ ಸೆಳೆದಿರುವ ಈ ಭವ್ಯ ದೇಗುಲದಲ್ಲಿ ಪ್ರತಿಷ್ಠಾಪನೆಯಾಗುವ ದೇವರ ವಿಗ್ರಹ ಕೂಡಾ ಕುತೂಹಲದ ಕೇಂದ್ರಬಿಂದುವಾಗಿದೆ.
ಅಯೋಧ್ಯೆ ಶ್ರೀರಾಮ ದೇಗುಲದಲ್ಲಿ ಬಾಲ ರಾಮನ ವಿಗ್ರಹ ಪ್ರತಿಷ್ಠಾಪನೆಗೊಳ್ಳಲಿದೆ. ಮೂವರು ಶಿಲ್ಪಿಗಳು ಕೆತ್ತಿರುವ ವಿವಿಧ ವಿಗ್ರಹಗಳ ಪೈಕಿ ಮೈಸೂರು ಮೂಲದ ಕನ್ನಡಿಗ ಅರುಣ್ ಯೋಗಿ ರಾಜ್ ಅವರ ಶಿಲ್ಪಕಲೆಯಲ್ಲಿ ಅರಳಿರುವ ವಿಗ್ರಹವೇ ಆಯ್ಕೆಯಾಗಲಿದೆ ಎಂಬ ಮಾತುಗಳು ಹರಿದಾಡಿವೆ. ಇದೀಗ ಮೈಸೂರಿನ ಶಿಲ್ಪಿ ಅರುಣ್ ಯೋಗಿ ರಾಜ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಪವಿತ್ರ ಕ್ಷೇತ್ರ ಕೇದಾರನಾಥದಲ್ಲಿರುವ ಶ್ರೀ ಶಂಕರಾಚಾರ್ಯರ ಪ್ರತಿಮೆಯನ್ನು ಕೆತ್ತಿದ ಹೆಗ್ಗಳಿಕೆಯೂ ಅರುಣ್ ಯೋಗಿ ರಾಜ್ ಅವರದ್ದು. ಇದೀಗ ಅವರು ವಿಶ್ವದ ಅತೀ ಭವ್ಯವಾದ ಅಯೋಧ್ಯೆ ಶ್ರೀರಾಮ ದೇಗುಲದ ವಿಗ್ರಹದ ಶಿಲ್ಪಿಯಾಗಿಯೂ ಖ್ಯಾತಿ ಹೊಂದಲಿದ್ದಾರೆ. ನವದೆಹಲಿಯ ಇಂಡಿಯಾ ಗೇಟ್‌ನಲ್ಲಿರುವ ನೇತಾಜಿ ಸುಭಾಶ್ಚಂದ್ರ ಬೋಸ್ ಪ್ರತಿಮೆಯೂ ಇವರು ಕೆತ್ತಿರುವುದೇ ಆಗಿದೆ.

ಮೂರು ವಿಗ್ರಹಗಳು..!
ಮೂವರು ಶಿಲ್ಪಿಗಳು ರಾಮ ಲಲ್ಲಾನ ವಿಗ್ರಹಗಳನ್ನು ಕೆತ್ತಿದ್ದಾರೆ. ಎಲ್ಲವೂ ಆಕರ್ಷಕ ವಿಗ್ರಹಗಳೇ.
ಅರುಣ್ ಯೋಗಿರಾಜ್ – ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆಯ ಶಿಲೆಯಲ್ಲಿ ವಿಗ್ರಹ ಕೆತ್ತನೆ.
ಹೊನ್ನಾವರದ ಗಣೇಶ್ ಭಟ್ – ಕಾರ್ಕಳದ ತೆಗೆದುಕೊಂಡು ಹೋಗಲಾಗಿದ್ದ ಕಲ್ಲಿನಲ್ಲಿ ವಿಗ್ರಹ ಕೆತ್ತನೆ.
ರಾಜಸ್ಥಾನದ ನಾರಾಯಣ ಪಾಂಡೆ – ಶ್ವೇತ ಚಂದ್ರಕಾಂತ ಶಿಲೆಯಲ್ಲಿ ವಿಗ್ರಹ ಕೆತ್ತನೆ.
ಅವುಗಳಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವುದು ಕನ್ನಡಿಗ ಅರುಣ್ ಯೋಗಿ ರಾಜ್ ಅವರದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮುಖ್ಯಸ್ಥರು ಈ ಬಗ್ಗೆ ಅಂತಿಮಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಭಿನಂದನೆಗಳ ಮಹಾಹೊಳೆ..!
ಅರುಣ್ ಯೋಗಿರಾಜ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಕೊಂಡಾಡಿದ್ದಾರೆ. ಇದೀಗ ಅರುಣ್ ಯೋಗಿರಾಜ್ ಅವರು ದೇಶವ್ಯಾಪಿ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ.
ಈ ನಡುವೆ, ಅಯೋಧ್ಯೆ ರಾಮಲಲ್ಲಾನ ವಿಗ್ರಹ ಕರ್ತೃ ಅರುಣ್ ಯೋಗಿರಾಜ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ರಾಜ್ಯಕ್ಕೂ ರಾಮಮಂದಿರಕ್ಕೂ ಮತ್ತೊಂದು ವಿಶೇಷ ನಂಟನ್ನು ಅರುಣ್ ರಾಜ್ ಸಾಧ್ಯವಾಗಿಸಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಬಣ್ಣಿಸಿದ್ದಾರೆ.
ರಾಮಾಯಣದಲ್ಲಿ ನಮ್ಮ ಕಿಷ್ಕಿಂಧೆಯ ಆಂಜನೇಯ ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರನ ಪಟ್ಟಾಭಿಷೇಕದಲ್ಲಿ ವಿಶೇಷ ಪಾತ್ರ ವಹಿಸಿದ್ದನ್ನು ನೆನಪಿಸುವಂತೆ ಈಗ ಮತ್ತೊಂದು ಸುಯೋಗ ಒದಗಿಬಂದಿದೆ. ಮೈಸೂರಿನ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಅವರು ಕೆತ್ತಿರುವ ಪ್ರಭು ಶ್ರೀರಾಮನ ವಿಗ್ರಹ ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆಗೆ…
— B.S.Yediyurappa (Modi Ka Parivar) (@BSYBJP) January 1, 2024
ರಾಮನ ಭಂಟ ಹನುಮಂತನು ಹುಟ್ಟಿರುವ ನಮ್ಮ ಕನ್ನಡನಾಡಿನಲ್ಲಿ, ಶ್ರೀರಾಮನಿಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಅದೇ ರೀತಿ ಶ್ರೀರಾಮನ ವಿಗ್ರಹವೂ ಕರ್ನಾಟಕದ ಶಿಲ್ಪಿಯಿಂದಲೇ ಕೆತ್ತನೆಯಾಗಿರುವುದು ಭಾವನಾತ್ಮಕ ಭಕ್ತಿ ತರಿಸಿದೆ ಎನ್ನುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡಾ ಅರುಣ್ ಯೋಗಿರಾಜ್ ಅವರನ್ನು ಅಭಿನಂಧಿಸಿದ್ದಾರೆ.
“ಶ್ರೀರಾಮ-ಹನುಮರ ಬಾಂಧವ್ಯಕ್ಕೆ ಕರುನಾಡ ನಂಟಿದೆ, ಇದೀಗ ರಾಮನೂರಿನ ಗುಡಿಯನು
ಮೈಸೂರಿನ ಬಾಲರಾಮನು ಬೆಳಗುವನು”ಮೈಸೂರಿನ ಅಪ್ರತಿಮ ಶಿಲ್ಪ ಕಲಾ ಪ್ರತಿಭೆ ಅರುಣ್ ಯೋಗಿರಾಜ್ ಅವರ ಭಕ್ತಿ ಕೌಶಲ್ಯದ ಕೆತ್ತನೆಯಿಂದ ಪಡಿಮೂಡಿದ ರಾಮಲಲಾ ಮೂರ್ತಿಯು ಜನವರಿ 22 ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ನೆರವೇರುತ್ತಿರುವುದು ಮೈಸೂರಿನ ಹಿರಿಮೆ,… pic.twitter.com/y5qxaXbmDf
— Vijayendra Yediyurappa (Modi Ka Parivar) (@BYVijayendra) January 1, 2024






















































ಅಭಿನಂದನೆಗಳ ಮಹಾಹೊಳೆ..! 