ಬೆಂಗಳೂರು: ಅಸಮರ್ಥರ ಕೈಗೆ ಶಿಕ್ಷಣ ಇಲಾಖೆಯನ್ನು ಕೊಟ್ಟರೆ ಏನಾಗುತ್ತದೆ ಎಂದು ಬಿಜೆಪಿ ಪ್ರಶ್ನಿಸುವ ಮೂಲಕ ಸಚಿವ ಮಧು ಬಂಗಾರಪ್ಪ ಬಗ್ಗೆ ಪ್ರತಿಪಕ್ಷ ಬಿಜೆಪಿ ವ್ಯಂಗ್ಯವಾಡಿದೆ.
ಈ ಬಗ್ಗೆ ಟ್ವೀಟ್ ಮೂಲಕ ಟೀಕಾಸ್ತ್ರ ಪ್ರಯೋಗಿಸಿರುವ ಬಿಜೆಪಿ, ಅಧಿಕಾರಕ್ಕೆ ಬಂದ ದಿನದಿಂದ ಅನಕ್ಷರಸ್ಥ ಶಿಕ್ಷಣ ಸಚಿವ
ಮಧು ಬಂಗಾರಪ್ಪ ಅವರ ಅಮೋಘ ಸಾಧನೆಗಳೆಂದು ಹೇಳಿ ಶಿಕ್ಷಣ ಇಲಾಖೆಯ ಅನೇಕ ಯಡವಟ್ಟುಗಳ ಪಟ್ಟಿ ನೀಡಿದೆ.
- ಶಾಲಾ ಮಕ್ಕಳ ಕೈಯಲ್ಲಿ ಟಾಯ್ಲೆಟ್ ಕ್ಲೀನ್
- ಚೆಕ್ ಬೌನ್ಸ್ ಮಾಡಿಸಿ ವಂಚನೆ
- ಪಠ್ಯ ಪರಿಷ್ಕರಣೆ ಮೂಲಕ ಎಡಬಿಡಂಗಿ ಸಿದ್ಧಾಂತ ಹೇರಿಕೆ
- ಮೊಟ್ಟೆ ವಿತರಣೆ ಶಿಕ್ಷಕರ ಜೇಬಿಗೆ ಕತ್ತರಿ
- ಅಪಾಯದ ಸ್ಥಿತಿಯಲ್ಲಿ ಶಾಲಾ ಕಟ್ಟಡಗಳು
ಅಪ್ರಯೋಜಕ ಅಸಮರ್ಥರ ಕೈಗೆ ಶಿಕ್ಷಣ ಇಲಾಖೆಯನ್ನು ಕೊಟ್ಟರೆ ಏನಾಗುತ್ತದೆ ಅನ್ನುವುದಕ್ಕೆ ಈ ಪ್ರಕರಣಗಳೇ ಸಾಕ್ಷಿ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಅಧಿಕಾರಕ್ಕೆ ಬಂದ ದಿನದಿಂದ ಅನಕ್ಷರಸ್ಥ ಶಿಕ್ಷಣ ಸಚಿವ @Madhu_Bangarapp ಅವರ ಅಮೋಘ ಸಾಧನೆಗಳು:
▪ ಶಾಲಾ ಮಕ್ಕಳ ಕೈಯಲ್ಲಿ ಟಾಯ್ಲೆಟ್ ಕ್ಲೀನ್
▪ ಚೆಕ್ ಬೌನ್ಸ್ ಮಾಡಿಸಿ ವಂಚನೆ
▪ ಪಠ್ಯ ಪರಿಷ್ಕರಣೆ ಮೂಲಕ ಎಡಬಿಡಂಗಿ ಸಿದ್ಧಾಂತ ಹೇರಿಕೆ
▪ ಮೊಟ್ಟೆ ವಿತರಣೆ ಶಿಕ್ಷಕರ ಜೇಬಿಗೆ ಕತ್ತರಿ
▪ ಅಪಾಯದ ಸ್ಥಿತಿಯಲ್ಲಿ ಶಾಲಾ ಕಟ್ಟಡಗಳು…— BJP Karnataka (@BJP4Karnataka) January 2, 2024






















































