ಬೆಂಗಳೂರು: ಕರಾವಳಿಯಲ್ಲಿನ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಹಿಂದೂ ಕಾರ್ಯಕರ್ತರಿಗೆ ಸ್ಫೂರ್ತಿ ನೀಡುವ ಹಾಡೊಂದು ಬಿಡುಗಡೆಯಾಗಿದೆ. ‘ಜೈ ಜೈ ಜೈ ಭಜರಂಗಿ’ ಎಂಬ ಹಾಡು ದೇಶಪ್ರೇಮದ ಕಿಚ್ಚು ಹಚ್ಚುವಂತಿದೆ. ಸ್ವಾತಂತ್ರ್ಯ ಸಂಗ್ರಾಮದ ವೀರ ಸೇನಾನಿಗಳ ಶೌರ್ಯವನ್ನು ಹಾಡಿನ ರೂಪದಲ್ಲಿ ಸಾರಿ ಹೇಳಲಾಗಿದೆ. ತುಳುವ ಬೊಳ್ಳಿ ದಯಾನಂದ ಕತ್ತಲ್ ಸರ್ ಅವರ ಸಾಹಿತ್ಯಕ್ಕೆ, ಜಗದೀಶ್ ಪುತ್ತೂರು ಅವರು ಕಂಠ ಸಿರಿಯ ಸಾಥ್ ನೀಡಿದ್ದಾರೆ. ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.